ಸುದ್ದಿಲೈವ್/ಶಿವಮೊಗ್ಗ
ಎರಡು ನಾಪತ್ತೆ ಪ್ರಕರಣಗಳು ದಾಖಲಾಗಿವೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಅಪ್ರಾಪ್ತ ಬಾಲಕನೋರ್ವ ತಂದೆ ಮೊಬೈಲ್ ಕೊಡಿಸಲಿಲ್ಲ ಎಂದು ಮನೆ ಬಿಟ್ಟು ಹೋಗಿದ್ದಾನೆ.
ಆದರೆ ಮತ್ತೊಂದು ಪ್ರಕರಣದಲ್ಲಿ ಅಯೋಧ್ಯೆಗೆ ಹೋದ 36 ವರ್ಷದ ವ್ಯಕ್ತಿ ಮನೆಗೆ ವಾಪಾಸಾಗಿಲ್ಲ. ಮದುವೆ ಆಗಿಲ್ಲವೆಂದು ಮನಸ್ಸಿನಲ್ಲಿಟ್ಟುಕೊಂಡು ಮನೆಬಿಟ್ಟು ಹೋಗಿರಬಹುದು ಎಂದು ಶಂಕಿಸಿ ಅವರ ತಾಯಿ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಕಟ್ಟುತ್ತಿದ್ದ ತಂದೆಗೆ ಅಪ್ರಾಪ್ತ ಬಾಲಕ ಹೊಸ ಮೊಬೈಲ್ ಕೊಡಿಸಿ ಎಂದು ಕೇಳಿದ್ದಾನೆ. ಮನೆಕಟ್ಟಿಸುವ ಕೆಲಸ ಮುಗಿಯಲಿ ಕೊಡಿಸುವೆ ಎಂದು ಹೇಳಿದ್ದಾರೆ. ಆದರೆ ಬಾಲಕ ಬಟ್ಟೆ ಮತ್ತು ತಂದೆಯ ಮೊಬೈಲ್ ತೆಗೆದುಕೊಂಡು ಮನೆಬಿಟ್ಟು ಹೋಗಿದ್ದಾನೆ. ಇದು ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಕಿ ವ್ಯಾಪಾರ ಮಾಡುತ್ತಿದ್ದ 36 ವರ್ಷದ ವ್ಯಕ್ತಿ ಮೇ.4 ರಂದು ಅಯೋಧ್ಯಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸಾಗಿಲ್ಲ. ತಾಯಿ ಕರೆ ಮಾಡಿದಾಗ ಮೊಬೈಲ್ ಕರೆ ಸ್ವೀಕರಿಸಿಲ್ಲ. ಒಮ್ಮೆ ಕರೆ ಮಾಡಿ ಮನಸ್ಸಿಗೆ ಬೇಜಾರಾಗಿದೆ ಹೊರಗೆ ಇದ್ದೇನೆ ಎಂದು ತಿಳಿಸಿ ಎಲ್ಲಿರುವುದಾಗಿ ತಿಳಿಸಿರಲಿಲ್ಲ.
ಮದುವೆಗೆ ಹೆಣ್ಣು ಹುಡುಕುತ್ತಿದ್ದವನಿಗೆ ಹೆಣ್ಣು ಸಿಕ್ಕಿರಲಿಲ್ಲ. ಬ್ಯಾಂಕಿನಲ್ಲೂ ಸ್ವಲ್ಪ ಸಾಲ ಮಾಡಿದಾಗ್ಯೂ ವ್ಯಕ್ತಿ ಮನೆಬಿಟ್ಟು ಹೋಗಿದ್ದು ಮೊನ್ನೆಯವರೆಗೂ ವಾಪಾಸಾಗಿಲ್ಲ.
ಇದನ್ನೂ ಓದಿ-https://suddilive.in/archives/15136