ಸುದ್ದಿಲೈವ್/ಶಿವಮೊಗ್ಗ
ಲೋಕಸಭಾ ಚುನಾವಣೆಯ ಜೊತೆ ಜೊತೆಯಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಈ ಕ್ಷೇತ್ರದ ಚುನಾವಣೆಯಲ್ಲಿ ಬ್ರಾಹ್ಮಣರಿಗೆ ಬಿಜೆಪಿ ಪಕ್ಷದಿಂದ ಟಿಕೇಟ್ ಕೊಡುವಂತೆ ಬ್ರಾಹ್ಮಣ ರಾಜಕೀಯ ವೇದಿಕೆ ಮತ್ತು ಇತರೆ ಸಂಘಟನೆಗಳು ಆಗ್ರಹಿಸಿದೆ.
ಹಾಗಾಗಿ ಈ ಬಾರಿ ಬ್ರಾಹ್ಮಣ ಸಮುದಾಯಕ್ಕೆ ನೈರುತ್ಯ ಪದವೀಧರ ಕ್ಷೇತ್ರ್ಕೆ ಬ್ರಾಹ್ಮಣ ಸಮುದಾಯದವರಿಗೆ ಕೊಡುವಂತೆ ತಾಲೂಕು ಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಸುರೇಶ್ ಆರ್‌ನಾಡಿಗ್ ಆಗ್ರಹಿಸಿದರು.
ಸಾಮಾನ್ಯ ಕಾರ್ಯಕರ್ತರಿಗೆ ಕೊಟ್ಟರು ಪರವಾಗಿಲ್ಲ. ಮಾಜಿ ನಗರ ಸಭಸ ಅಧ್ಯಕ್ಷ ಎಂ ಶಂಕರ್, ಮಾಜಿ ಸೂಡ ಅಧ್ಯಕ್ಷ ಎಸ್ ದತ್ತಾತ್ರಿ, ಮಾಜಿ ಶಾಸಕ ರಘುಪತಿ ಭಟ್, ಮಾಜಿ ಎಂ ಎಲ್ ಸಿ ಭಾನುಪ್ರಕಾಶ್, ಇವರಿಗೆ ಟಿಕೇಟ್ ನೀಡಬೇಕೆಂದು ಆಗ್ರಹಿಸಲಾಗಿದೆ.
ಈ ನಾಲ್ಕು ಹೆಸರನ್ನ ಬಿಜೆಪಿ ಹೈಕಮ್ಯಾಂಡ್ ಗೆ ಪತ್ರದ ಮೂಲಕ ನೀಡಲಾಗಿದೆ. ಕಖೆದ 30 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಅವರಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ. ಈ ಆಗ್ರಹಕ್ಕೆ ಮಾಧ್ಯಮಗಳ ಕೆಲ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ-https://suddilive.in/archives/14178