Girl in a jacket

ನಿತ್ರಾಣಗೊಂಡು ನಿಂತಿರುವ ಆನೆ

ಸುದ್ದಿಲೈವ್/ಶಿವಮೊಗ್ಗ

ಕಾಡಾನೆಗಳು ಕಾಡಿನಲ್ಲಿ ಅನಾಥವಾಗಿ ನಿಂತಲ್ಲಿಯೇ ನಿಂತು ಅನಾರೋಗ್ಯದಿಂದ ಸಾವನ್ನಪ್ಪುವ ಘಟನೆಗಳು ಕಳೆದ ವರ್ಷದ ರಾಜ್ಯದಲ್ಲಿ ದೊಡ್ಡಮಟ್ಟಕ್ಕೆ ಸುದ್ದಿ ಮಾಡಿತ್ತು.

ಅನಾರೋಗ್ಯಕ್ಕೀಡಾದ ಆನೆಯೊಂದನ್ನ ಹಿಡಿಯಲು ಹೋದಾಗ ಅದು ಅಟ್ಯಾಕ್‌ ಮಾಡಿದ ಘಟನೆಯು ನಡೆದಿತ್ತು. ಈ ವರ್ಷ ಅಂತಹುದ್ದೆ ಒಂದು ಘಟನೆ ಭದ್ರಾ ಹಿನ್ನೀರು ಪ್ರದೇಶದಲ್ಲಿ ನಡೆದಿದೆ. ಇವತ್ತು ಈ ಘಟನೆ ಬೆಳಕಿಗೆ ಬಂದಿದ್ದು ಅರ‍ಣ್ಯ ಇಲಾಖೆಯ ಅಧಿಕಾರಿಗಳು ನಿತ್ರಾಣಗೊಂಡಿರುವ ಆನೆಯೊಂದರ ಆರೋಗ್ಯ ಪರಿಶೀಲನೆಗೆ ಮುಂದಾಗಿದ್ದಾರೆ.

ಭದ್ರಾ ಹಿನ್ನೀರು ಪ್ರದೇಶ, ಮಾರಿದಿಬ್ಬದ ಸಮೀಪದ ಶುಂಠಿಕೆರೆಯ ಬಳಿಯಲ್ಲಿ ಆನೆಯೊಂದು ತನ್ನ ಮರಿಯೊಂದಿಗೆ ನಿಂತಲ್ಲಿಯೇ ನಿಂತು ಬಿಟ್ಟಿದೆ. ಆನೆಗಳು ಅನಾರೋಗ್ಯಕ್ಕೀಡಾದಾಗ ಹೀಗೆ ವರ್ತಿಸುತ್ತದೆ.

ಇಲ್ಲಿಯು ಆನೆ ಅನಾರೋಗ್ಯಕ್ಕೀಡಾಗಿದೆ. ನಿತ್ರಾಣಗೊಂಡು ಪಕ್ಕೆಲೆಬುಗಳು ಕಾಣುತ್ತಿರುವ ಸ್ಥಿತಿಯಲ್ಲಿರುವ ಕಾಡಾನೆ ಕಳೆದ 10 ದಿನಗಳಿಂದಲೂ ಇಲ್ಲೆ ಇದೆ ಎನ್ನುತ್ತಾರೆ ಸ್ಥಳೀಯರು. ಚೂರುಪಾರು ಆಹಾರವನ್ನು ಸಹ ಸೇವಿಸದ ಕಾಡಾನೆ ನಿಂತ ಜಾಗದಿಂದ ಒಂದು ಹೆಜ್ಜೆಯನ್ನ ಸಹ ಮುಂದಿಟ್ಟಲ್ಲವಂತೆ.

ಸದ್ಯಕ್ಕೆ ಸ್ಥಳೀಯರು ಮರಿಯಾನೆಗೆ ಬೇಕಿರುವ ಆಹಾರವನ್ನು ಒದಗಿಸುತ್ತಿದ್ದು ಅದು ಸುರಕ್ಷಿತವಾಗಿದೆ. ಆದರೆ ತಾಯಿ ಆನೆಗೆ ಆಹಾರ ತಿನ್ನದ ಕಾರಣಕ್ಕೆ ಸ್ಥಳೀಯರು ಏನೂ ಮಾಡಲಾಗ್ತಿಲ್ಲ. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಆನೆ ತನ್ನ ಮರಿಯನ್ನ ಉಳಿಸಲು ಅದು ಇಲ್ಲಿಯೇ ನಿಂತಿರಬಹುದು ಎನ್ನಲಾಗುತ್ತಿದೆ.

ಸಂಪೂರ್ಣವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಆನೆಯನ್ನ ಅರ‍ಣ್ಯ ಇಲಾಖೆಯ ಅಧಿಕಾರಿಗಳು ನೋಡಿಕೊಂಡು ಹೋಗಿದ್ದಾರೆ. ಅರಣ್ಯ ಸಿಬ್ಬಂದಿ ಆನೆಗೆ ಬೇಕಿರುವ ಆಹಾರವನ್ನು ಸ್ಥಳದಲ್ಲಿ ಒದಗಿಸಿದ್ದಾರೆ. ಆದರೆ ಆನೆ ಆಹಾರ ತೋರಿಸ್ತಿಲ್ಲ. ಸ್ಥಳೀಯರು ಒತ್ತಾಯಿಸುವಂತೆ, ಆನೆಯಾದರೇನು ಅದರದ್ದು ಒಂದು ಜೀವ. ಅದನ್ನ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವೈದ್ಯಕೀಯ ಟೀಂ ತಕ್ಷಣ ಕ್ರಮಕೈಗೊಳ್ಳಬೇಕು.ಆನೆಯನ್ನ ಹಿಡಿದು ಆನೆ ಬಿಡಾರಕ್ಕೆ ವರ್ಗಾಯಿಸಿ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.

ಇಲ್ಲಾವಾದರೆ ನೀರಿಲ್ಲದ ಹಿನ್ನೀರ ಪ್ರದೇಶದಲ್ಲಿ ಆನೆಯೊಂದು ಬರದ ಪಳಯುಳಿಕೆಯಾಗಿ ಕಾಣುವಂತಹ ದೃಶ್ಯ ಎದುರಾಗುತ್ತದೆ. ಅಂತಹದ್ದಕ್ಕೆ ಅರಣ್ಯ ಇಲಾಖೆ ಅವಕಾಶ ನೀಡದೇ ಇರಲಿ.

ಇದನ್ನೂ ಓದಿ-https://suddilive.in/archives/14186

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು