ಸುದ್ದಿಲೈವ್/ಶಿಕಾರಿಪುರ
ವನ್ಯ ಜೀವಿಯನ್ನ ಬೇಟೆಯಾಡಲು ಬಂದ ಆರೋಪದ ಮೇರೆ ಇಬ್ಬರು ಆರೋಪಿಗಳನ್ನ ಅಂಬ್ಲಿಗೋಳ ಅರಣ್ಯ ಇಲಾಖೆಯವರು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ನಾಡ ಬಂದೂಕು, ಹಾಗೂ ಒಂದು ಮೃತವಾಗಿರುವ ಉಡವನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನ ಶಿಕಾರಿಪುರ ತಾಲೂಕಿನ ಮಂಜಪ್ಪ(60), ಈಶ್ವರಪ್ಪ (38) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಅಂಬ್ಲಿಗೊಳ ವಲಯ ವ್ಯಾಪ್ತಿ ಒಳಗೊಂಡ ಡಿಎಫ್‌ಒ ಸಂತೋಷ್ ಕುಮಾರ್, ಎಸಿಎಫ್ ಸುರೇಶ್ ಬಿ, ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯ್ಲಲಿ, ಆರ್‌ಎಫ್‌ಒ ಮಾಧವ ದೊಡ್ಡಬಾಡಗಿ, ಡಿಆರ್‌ಎಫ್‌ಒ ಪ್ರಕಾಶ್ ದೊಡ್ಡಮನಿ ನೇತೃತ್ವದ ಚಂದ್ರಪ್ಪ ಲಮಾಣಿ, ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.
ಇದನ್ನೂ ಓದಿ-https://suddilive.in/archives/15086
Tags:
ಕ್ರೈಂ ನ್ಯೂಸ್