ಸುದ್ದಿಲೈವ್/ಶಿವಮೊಗ್ಗ
ಮೇ.7 ರಂದು ನಡೆಯಲಿರುವ ಮತದಾನಕ್ಕೆ ನಾಳೆ ಸಂಜೆ 5 ಗಂಟೆಯ ನಂತರ ಬಹಿರಂಗ ಸಭೆಗೆ ತೆರೆಬೀಳಲಿದೆ.
ಬಹಿರಂಗ ಸಭೆಗೆ ತೆರೆಬೀಳುವ ಹಿನ್ನಲೆಯಲ್ಲಿ ಇಂದು ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪನವರ ರೋಡ್ ಶೋಗಳು ನಗರದಲ್ಲಿ ಧೂಳೆಬ್ಬಿಸಿದೆ.
ಇಂದು ಕಾಂಗ್ರೆಸ್ ನ ರೋಡ್ ಶೋ ಭರ್ಜರಿಯಾಗಿ ನಡೆದಿದೆ. ಇಂದು ಶಿವಮೊಗ್ಗದಲ್ಲಿ ಸುಮಾರು 50 ಕಿಮಿನಷ್ಟು ಶಿವಣ್ಣ ರೋಡ್ ಶೋ ನಡೆಸಿದ್ದಾರೆ. ಇವರಿಗೆ ದುನಿಯಾ ವಿಜಿ ಸಾಥ್ ನೀಡಿದ್ದಾರೆ. ಬೆಳಿಗ್ಗೆ ಬೊಮ್ಮನ್ ಕಟ್ಟೆಯ ಆಶ್ರಯ ಬಡಾವಣೆಯ ಕೊನೆಯ ಬಸ್ ಸ್ಟ್ಯಾಂಡ್ ನಿಂದ ಆರಂಭಗೊಂಡ ರೋಡ್ ಶೋ
ಮೇದಾರ ಕೇರಿ, ಪೊಲಞಿಸ್ ಚೌಕಿ, ಫ್ಲೈ ಓವರ್ ನಿಂದ ಕಾಶಿಪುರ, ಆಲ್ಕೊಳ ವೃತ್ತ, ಗಾಡಿಕೊಪ್ಪ, ವಾಪಾಸ್ ಆಲ್ಲೊಳ ವೃತ್ತ, ಗೋಪಾಳ ಡಬ್ಬಲ್ ರಸ್ತೆ, ಗೋಪಾಳ ಬಸ್ ನಿಲ್ದಾಣ, ಮುಖ್ಯ ರಸ್ತೆಯ ಮೂಲಕ ಟಿಪ್ಪುನಗರ, ಅಣ್ಣಾನಗರ, ಮಿಳಘಟ್ಟ ಇಂದಿರಾ ಕ್ಯಾಂಟೀನ್, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಹರಕೆರೆ, ಕುರುಬರ ಪಾಳ್ಯದಿಂದ ಸೀಗೆಹಟ್ಟಿ ತಲುಪಿದೆ.
ಸಂಜೆ ಪುರಲೆಯಿಂದ ಗುರುಪುರ, ಎಂ ಆರ್ ಎಸ್ ಬೆಕ್ಕಿನಕಲ್ಮಠ ವೃತ್ತ, ಕೋಟೆ, ಲಷ್ಕರ್ ಮೊಹಲ್ಲಾ, ನಾಗಪ್ಪನಕೇರಿ, ಕೆ.ಆರ್ ಪುರಂ ಅಮೀರ್ ಅಹ್ಮದ್ ವೃತ್ತದ ವರೆಗೆ ರೋಡ್ ಶೋ ನಡೆದಿದೆ ಇನ್ನೂ ರೋಡ್ ಶೋ ಬಾಕಿ ಇದೆ.
ಅದರಂತೆ ಈಶ್ವರಪ್ಪನವರು ಮಾರಮ್ಮನ ದೇವಸ್ಥಾನದಿಂದ ಗಾಂಧಿ ಬಜಾರ್ ನಲ್ಲಿ ರೋಡ್ ಶೋ ನಡೆಸಿದ್ದಾರೆ. ಬಸ್ ನಲ್ಲಿ ಬಂದ ಜನ ಈಶ್ವರಪ್ಪನವರ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ. ಅದರಂತೆ ಸಂಸದರ ಪರವಾಗಿ ಇಂದು ಶಾಸಕ ಚೆನ್ನಬಸಪ್ಪ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ರೋಡ್ ಶೋ ನಡೆಸಿದ್ದಾರೆ.
ಗುರು ಶಿಷ್ಯರು ಇಂದು ಬೇರೆ ಬೇರೆ ಆಗಿದ್ದಾರೆ. ಗುರುವಿನ ರೋಡ್ ಶೋ ಹಿಂದೆನೆ ಶಿಷ್ಯನ ರೋಡ್ ಶೋ ಪೈಪೋಟಿಯಲ್ಲಿ ನಡೆದಿದೆ. ಕೆಆರ್ ಎಸ್ ಪಾರ್ಟಿಯ ಅಭ್ಯರ್ಥಿ ಪರ ಗೋಪಿ ವೃತ್ತದಲ್ಲಿ ಮತಯಾಚನೆ ನಡೆದಿದೆ.
ಇದನ್ನೂ ಓದಿ-https://suddilive.in/archives/14213