Girl in a jacket

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ವಾರ್ಡ್ ಅಧ್ಯಕ್ಷರ ನಡುವೆ ಮಾರಾಮಾರಿ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ರೋಡ್ ಶೋ ನಲ್ಲಿ ಕ್ಷುಲ್ಲಕ ಕಾರಣಕ್ಕೆ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನ ಮೇಲೆ ಪಕ್ಷದ ಪುರಲೆ ವಾರ್ಡ್ ಅಧ್ಯಕ್ಷರ ನಡುವೆ ಗಲಾಟೆಯಾಗಿದೆ.‌ ಬ್ಲಾಕ್ ಅಧ್ಯಕ್ಷರ ಮೇಲೆ ಹಲ್ಲೆ ನಡೆದಿದೆ.

ನಟ ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ಇಂದು ಹಲವೆಡೆ ರೋಡ್ ಶೋ ನಡೆದಿದೆ. ಪುರಲೆಯ ಅಂಬೆಡ್ಕರ್ ವೃತ್ತದಿಂದ ಹೊರಟ ರೋಡ್ ಶೋ ನಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ವಾರ್ಡ್ ಅಧ್ಯಕ್ಷ ಮಂಜುರವರ ನಡುವೆ ಕೆಲ ಮಾತುಗಳ ವಿಚಾರದಲ್ಲಿ ಗಲಾಟೆಯಾಗಿದೆ.

ಮಂಜುವಿನ ಸಹಚರರು ಬ್ಲಾಕ್ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಬ್ಲಾಕ್ ಅಧ್ಯಕ್ಷರ ತುಟಿ ಮತ್ತು ಮೂಗಿನಿಂದ ರಕ್ತ ಸುರಿದಿರುವುದು ತಿಳಿದು ಬಂದಿದೆ. ಆದರೆ ಶಿವಕುಮಾರ್ ಅವರಿಗೆ ಈ ಕುರಿತು ಮಾತನಾಡಿಸಿದಾಗ ಏನೂ ಆಗಿಲ್ಲ ಎಂದು ತಿಳಿಸಿದ್ದಾರೆ. ಸಣ್ಣ ಪುಟ್ಟ ಡಿಫರೆನ್ಸ್ ಗಳು ಇರುತ್ತವೆ. ಸರಿಯಾಗುತ್ತದೆ ಎಂಬ ಮಾತನ್ನ ಹೇಳಿದ್ದಾರೆ.

ವಾರ್ಡ್ ಅಧ್ಯಕ್ಷ ಮಂಜು ಅವರು ಗಲಾಟೆಯಾಗಿ ಹಲ್ಲೆಯಾಗಿರುವ ಬಗ್ಗೆ ವಿವರಣೆ ನೀಡಿದ್ದಾರೆ. ನಟ ಶಿವರಾಜ್ ಕುಮಾರ್ ಉಪಸ್ಥಿತರಿದ್ದ ಈ ರ್ಯಾಲಿಯಲ್ಲಿ ಉದಯೋನ್ಮುಖ ಯುವಕರ ನಡುವಿನ ಮಾರಾಮಾರಿ ಬೇಸರ ತರಿಸಿದೆ.

ಇದನ್ನೂ ಓದಿ-https://suddilive.in/archives/14210

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು