Girl in a jacket

ಸೋಮಿನಕೊಪ್ಪದಲ್ಲಿ ಹಣ ಹಂಚಿದ ಆರೋಪ

ಸುದ್ದಿಲೈವ್/ಶಿವಮೊಗ್ಗ

ಚುನಾವಣೆಯನ್ನ ಪ್ರಾಮಾಣಿಕತೆಯಲ್ಲಿ ನಡೆಸಬೇಕೆಂಬ ಚುನಾವಣೆ ಆಯೋಗ ಹೇಳುತ್ತಾ ಬಂದರೂ ಚುನಾವಣೆ ಅಷ್ಟೊಂದು ಪ್ರಾಮಾಣಿಕತೆಯಿಂದ ನಡೆಸಲು ಸಾಧ್ಯವಾ ಎಂಬ ಪ್ರಶ್ನೆಗೆ ಈ ಫೊಟೊ ಸಾಕ್ಷಿಯಾಗಿದೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿಗಳು ನಿನ್ನೆಯ ವರೆಗೆ 19 ಕೋಟಿ ನಗದು ಮತ್ತು ವಸ್ತುಗಳನ್ನ ಸೀಜ್ ಮಾಡಿರುವುದು ತಿಳಿಸಿದ್ದಾರೆ. ಕೊನೆಯ ಎರಡು ದಿನ ಅಭ್ಯರ್ಥಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಚುನಾವಣೆ ನಡೆಯಲಿದೆ ಎಂಬುದು ಎಲ್ಲರಿಗೂ ಗೊತ್ತು. ಸಾರ್ವಜನಿಕರು ಸಹ ಅಭ್ಯರ್ಥಿಗಳು ಹಂಚಲಿ ಎಂಬುದನ್ನ ನಿರೀಕ್ಷಿಸುವುದರಿಂದ ಆಯೋಗಕ್ಕೆ ಇದೊಂದು ಸವಾಲಾಗಿಯೇ ಉಳಿದುಕೊಳ್ಳುತ್ತದೆ.

ಎಂಸಿಸಿಯು ಸಹ ಕೊನೆಯ ದಿನಗಳಲ್ಲಿ ಮೈಯಲ್ಲಾ ಕಣ್ಣಾಗಿ ನಿಂತರೂ ಪ್ರಾಮಾಣಿಕತೆ ಚುನಾವಣೆ ನಡೆಸುವುದು ಕಷ್ಟ ಎಂಬ ಅನುಮಾನಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೇವಲ ಸಾರ್ವಜನಿಕರು ದೂರಿನ ಆಧಾರದ ಮೇಲೆ ಕ್ರಮ ಜರುಗಿಸುವ ಚುನಾವಣೆ ಅಧಿಕಾರಿಗಳ ನಿಲುವು ಬದಲಾಗಿ ಕೊನೆ ಎರಡು ದಿನ ಬೇರೆ ರೀತಿಯಲ್ಲಿ ನಡೆದರೆ ಮಾತ್ರ ಸಾರ್ವಜನಿಕರಿಗೆ ಹಣ ಹಂಚುವ ಕೆಲಸವನ್ನ ತಡೆಯಬಹುದು ಎನ್ನಬಹುದು.

ಸೋಮಿನಕೊಪ್ಪದ ಬೋವಿ ಕಾಲೋನಿಯಲ್ಲಿ ಕೆಲ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಕಾರಿನಲ್ಲಿ ಬಂದು ಮನೆ ಮನೆಗೆ ಹೋಗಿ ಹಣ ಹಂಚಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಕೆಲ ಫೊಟೊಗಳನ್ನ ಹಾಕಿದ್ದಾರೆ. ಆದರೆ ಹಣ ಹಂಚುವ ಫೊಟೊ ಮಾತ್ರ ಲಭ್ಯವಾಗಿಲ್ಲ. ಆದರೆ ಸ್ಥಳೀಯರ ಪ್ರಕಾರ ಭೋವಿ ಕಾಲೋನಿಯಲ್ಲಿ ಹಣ ಹಂಚಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ-https://suddilive.in/archives/14261

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು