ಜ್ಞಾನಸುಧಾ - ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಲಾಂಗ್ ಟರ್ಮ್ ತರಬೇತಿ

ಸುದ್ದಿಲೈವ್/ಉಡುಪಿ

ರಾಜ್ಯ ಹಾಗೂ ರಾಷ್ಟಮಟ್ಟದಲ್ಲಿ ನೀಟ್, ಜೆ.ಇ.ಇ, ಕೆ.ಸಿ.ಇ.ಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಮೋಘ ಸಾಧನೆ ಮಾಡಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ, ಇದೀಗ ನೀಟ್ ೨೦೨೪ರ ಪರೀಕ್ಷೆ ಬರೆದು, ಎಂ.ಬಿ.ಬಿ.ಎಸ್ ಸೀಟು ಪಡೆಯುವಲ್ಲಿ ವಿಫಲರಾದ ಆಯ್ದ ಅರ್ಹ ವಿದ್ಯಾರ್ಥಿಗಳಿಗೆ ಒಂದು ವರ್ಷದ ಸಂಪೂರ್ಣ ಉಚಿತ ಅಥವಾ ಶೇ.೫೦ ಶುಲ್ಕ ವಿನಾಯಿತಿಯೊಂದಿಗೆ ನೀಟ್ ಲಾಂಗ್ ಟರ್ಮ್ ತರಬೇತಿಯನ್ನು ನೀಡುವುದಾಗಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀಟ್ ೨೦೨೨ರಲ್ಲಿ ೧೦೭ ವಿದ್ಯಾರ್ಥಿಗಳು ಹಾಗೂ ನೀಟ್ ೨೦೨೩ರಲ್ಲಿ ೧೦೮ ವಿದ್ಯಾರ್ಥಿಗಳು ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಎಂ.ಬಿ.ಬಿ.ಎಸ್. ಸೀಟು ಪಡೆದಿರುತ್ತಾರೆ. (ಪ್ರತಿ ೪ ವಿದ್ಯಾರ್ಥಿಗಳಲ್ಲಿ ಒಬ್ಬರಂತೆ).

ನೀಟ್ ಲಾಂಗ್‌ಟರ್ಮ್ಗೆ ದಾಖಲಾತಿ ಬಯಸುವ ಆಸಕ್ತ ವಿದ್ಯಾರ್ಥಿಗಳು  ಗೆ ಲಾಗಿನ್ ಆಗಿ ಹೆಸರು ನೊಂದಾಯಿಸಿಕೊಳ್ಳ ಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸ ಬಹುದು. ಮೊದಲು ನೊಂದಾಯಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ-https://suddilive.in/archives/15378

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close