ಸುದ್ದಿಲೈವ್/ಶಿವಮೊಗ್ಗ
ಬರ ಪರಿಹಾರಕ್ಕೆ ಎನ್ ಡಿ ಆರ್ ಎಫ್ ಅಡಿ ಮಾರ್ಗ ಸೂಚಿಯ ಅಡಿಯಲ್ಲಿ ರಾಜ್ಯ ಸರ್ಕಾರ 38,74,31015 ರೂ ಬಿಡುಗಡೆ ಮಾಡಿದೆ. ಇದು ಎರಡನೇ ಹಂತದ ಪರಿಹಾರವಾಗಿದ್ದು ಜಿಲ್ಲೆಯ 59605 ರೈತರಿಗೆ ಬರಪರಿಹಾರ ಬಿಡುಗಡೆ ಮಾಡಲಾಗಿದೆ.
38,74,31015 ರೂ.ಗಳನ್ನ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಹಾಕಲಾಗಿದೆ. ಪರಿಹಾರ ವಿಚಾರದಲ್ಲಿ ಕುಂದು ಕೊರತೆಗಳು ಕಂಡು ಬಂದಲ್ಲಿ, ಜಿಲ್ಲೆಯಲ್ಲಿ ತಾಲೂಕು ವಾರು ಸಹಾಯವಾಣಿ ಆರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದಾಗಿದೆ.
ಸಹಾಯವಾಣಿ ತಾಲೂಕು ವಾರು ಹೀಗಿದೆ. ಶಿವಮೊಗ್ಗ ತಹಶೀಲ್ದಾರ್ ಕಚೇರಿ 08182-279311, ಭದ್ರಾವತಿ ತಾಲೂಕು ಕಚೇರಿ-08281-263466, ತೀರ್ಥಹಳ್ಳಿ 08181228239, ಸಾಗರ 08183-226074, ಶಿಕಾರಿಪುರ 08187-222239, ಸೊರಬ 08184-272241, ಹೊಸನಗರ 08185-221235 ಸಂಪರ್ಕಿಸಲು ಸೂಚಿಸಲಾಗಿದೆ.
ಇದನ್ನೂ ಓದಿ-https://suddilive.in/archives/14717