ಸುದ್ದಿಲೈವ್/ಕಾಶಿ
ವಾರಣಾಸಿ, ಕಾಶಿ, ಬನಾರಸ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳ ಹಿಂದೂಗಳ ಪುಣ್ಯಭೂಮಿ ಎನಿಸಿಕೊಂಡಿದೆ. ವರುಣ ಮತ್ತು ಅಸಿ ಎಂಬ ಹೆಸರಿನ ಎರಡು ನದಿಗಳು ಸುತ್ತುವರೆದಿರುವುದರಿಂದ ಇದು ವಾರಣಾಸಿ ಎಂದು ಕರೆಯಲ್ಪಡುತ್ತದೆ.
ಬಾರಣಾಸಿ ಎಂದು ಕರೆಯಲ್ಪಡುತ್ತಿದ್ದ ಊರನ್ನ ಬ್ರಿಟೀಶರ ಬಾಯಿಯಲ್ಲಿ ಬನಾರಸ್ ಆಗಿದೆ. ಇಲ್ಲಿ ಸಾವನ್ನಪ್ಪಿದರೆ ಮುಕ್ತಿ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ. ಇಂತಹ ಊರಿನಲ್ಲಿ ಕನ್ಬಡದ ಅಪ್ರಥಮ ವೀರ ಶಿವಪ್ಪ ನಾಯಕ ಬರೆದಿರುವುದು ಎನ್ನಲಾದ ಕನ್ನಡದ ಶಾಸನ ಪತ್ತೆಯಾಗಿದೆ. ಈ ಶಾಸನವನ್ನ ಓಡಾಡುವ ಸಂಕವಾಗಿ ಬಳಸಿಕೊಳ್ಳಲಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ನಾಡು ನುಡಿ, ನದಿನೀರು ಎಙದು ಭಾಷಣಕ್ಕ ಸೀಮಿತವಾಗದ ಶಾಸನವನ್ನ ಸಂರಕ್ಷಿಸುವ ಅಗತ್ಯವಿದೆ.
ಕೇವಲ ರಾಜ ಯುದ್ಧ ಮಾಡಿ ಗೆಲ್ಲುವುದು ಪ್ರಮುಖವಲ್ಲ. ಇಂತಹ ಶಾಸನಗಳು ಬಹಳ ಪ್ರಮುಖವಾದುದು. ಶಾಸನಗಳೆಂದರೆ ರಾಜಾಜ್ಞೆ ಎಂದು. ಇಂತಹ ಶಾಸನಗಳು ಕಾಶಿಯಲ್ಲಿ 16 ನೇ ಶತಮಾನದ ಕೆಳದಿ ಅರಸರ ಕಾಲದಲ್ಲಿನ ಕನ್ನಡದ ಶಾಸನಗಳು ಕನ್ನಡಿಗರ ಹೆಮ್ನೆಯನ್ನ ಹೆಚ್ಚಿಸುತ್ತದೆ.
3500 ವರ್ಷಗಳ ಲಿಖಿತ ಇತಿಹಾಸವಿರುವ ಏಕಮಾತ್ರ ಪಟ್ಟಣವಾದ ಕಾಶಿಯಲ್ಲಿ ಕನ್ನಡದ ಶಾಸನಗಳು ಪತ್ತೆಯಾಗುತ್ತವೆ ಎಂದರೆ ರೋಮಾಂಚನವಲ್ಲವೇ. ರಾಜ್ಯ ಸರ್ಕಾರ ಇದನ್ನ ಸಂರಕ್ಷಿಸಬೇಕು. ಸಾಗರದ ವಕೀಲ ಪ್ರವೀಣ್ ಸಾಗರ್ ಅವರು ಭೇಟಿ ನೀಡಿದಾಗ ಅಚಾನಕ್ ಆಗಿ ಪತ್ತೆಯಾದ ಶಾಸನವಾಗಿದೆ. ಇದು ಕಾಶಿಯಲ್ಲಿ ಅನಾಥವಾಗಿ ಬಿದ್ದಿರುವ ಶಾಸನವಾಗಿದೆ. ಕಪಿಲದಾರ ಸರೋವರದಲ್ಲಿ ಕೆಳದಿಯ ಶಿವಪ್ಪನಾಯಕನ ಶಾಸನ ಪತ್ತೆಯಾಗಿದೆ ಎನ್ನುತ್ತಾರೆ ವಕೀಲರು.
ಪತ್ತೆಯಾದ ಶಾಸನದಲ್ಲಿ ಕೆಳದಿಯ ಶಿವಪ್ಪನಾಯಕನ ಕಾಲದ್ದು ಎಂದು ಕಂಡು ಬಂದಿರುವ ಬರಹ ಇದೆ.ಕಪಿಲ ಸರೋವರದಲ್ಲಿ ಈ ಶಾಸನ ಅನಾಥವಾಗಿ ಬಿದ್ದಿದ್ದು ಒಡಾಡುವ ಸಂಕವಾಗಿ ಬಳಕೆತಾಗುತ್ತಿದೆ ಎಂದು ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-https://suddilive.in/archives/14712