ಸುದ್ದಿಲೈವ್/ಶಿವಮೊಗ್ಗ
ಕೆಲಸ ಕೊಟ್ಟ ಮಾಲೀಕನ ಪ್ರೀತಿಯ ವಿಚಾರದಲ್ಲಿ ಹಲ್ಲೆಯಾಗಿದೆ. ದುರ್ಗಿಗುಡಿಯ ಕನ್ಸರ್ವೆನ್ಸಿಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಣ್ಣಾನಗರದ ಸಹೋರಾದ ಮನೋಜ್ ಮತ್ತು ಇವರ ಸಹೋದರರು ಅಶೋಕನಗರದ ರಾಘವೇಂದ್ರ ಎಂಬುವರ ಜೊತೆ ಕೆಲಸಕ್ಕೆ ಇದ್ದರು. ರಾಘವೇಂದ್ರರಿಗೆ ಬಿಬಿಸ್ಟ್ರೀಟ್ ನ ಯುವತಿಯೊಂದಿಗೆ ಲವ್ ಇತ್ತು.
ಆಕೆಯನ್ನ ಮದುವೆಯಾಗಬೇಕೆಂದು ಕೊಂಡಿದ್ದ ರಾಘವೇಂದ್ರರಿಗೆ ಯುವತಿಯ ಸಹೋದರ ದೀಪು ಎಂಬುವರಿಗೆ ಇವರ ನಡುವಿನ ಪ್ರೀತಿ ಮತ್ತು ಮದುವೆಯಾಗುವುದು ಇಷ್ಟವಿರಲಿಲ್ಲ.
ಇವರಿಬ್ಬರ ನಡುವಿನ ಗಲಾಟೆಯನ್ನ ಮನೋಜ್ ತಪ್ಪಿಸಿ ಎಲ್ಲವನ್ನೂ ಕುಳಿತುಕೊಂಡು ಮಾತನಾಡಿ ಬಗೆಹರಿಸೋಣವೆಂದು ಹೇಳಿದ್ದರು. ಪ್ರತಿಸುತ್ತಿದ್ದ ಯುವತಿಯನ್ನ ರಾಘವೇಂದ್ರ ಬಿಬಿಸ್ಟ್ರೀಟ್ ನಿಂದ ದುರ್ಗಿಗುಡಿಯ ಪಿಜಿಗೆ ಸೇರಿಸಿದ್ದರು.
ಇದರಿಂದ ಕೋಪಗೊಂಡ ದೀಪು ಮನೋಜ್ ರಾಘವೇಂದ್ರರಿಗೆ ಸಪೋರ್ಟ್ ಮಾಡುತ್ತಿದ್ದಾನೆ ತಿಳಿದು ತನ್ನ ಸ್ನೇಹಿತರಾದ ದಾಸ ಯಾನೆ ದರ್ಶನ್ ರನ್ನ ಮನೋಜ್ ಮನೆಗೆ ಕಳುಹಿಸಿದ್ದಾನೆ. ಮೇ.15 ರಂದು ದಾಸ ಯಾನೆ ದರ್ಶನ್ ಮನೋಜ್ ನನ್ನ ದುರ್ಗಿಗುಡಿಯ ಪಂಚಮುಖಿ ದೇವಸ್ಥಾನದ ಬಳಿಯ ಕನ್ಸರ್ವೆನ್ಸಿಯಲ್ಲಿ ಕರೆದುಕೊಂಡು ಬಂದು ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಸುಮಾರು 6-30ರ ವೇಳೆಗೆ ಕಾರ್ತಿಕ್ ನನ್ನ ಕರೆದುಕೊಂಡು ಹೋಗಿ ರಾಘವೇಂದ್ರನನ್ನ ಕರೆಯಿಸು ಇಲ್ಲ ನಿನ್ನನ್ನ ಸುಮ್ಮನೆ ಬಿಡೊಲ್ಲ ಎಂದು ಬೆದರಿಕೆಸಹ ಹಾಕಲಾಗಿದೆ ಎಂದು ಮನೋಜ್ ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮನೋಜ್ ನ ಬಲಗಣ್ಣು ಮತ್ತು ತುಟಿಗೆ ಗಾಯವಾಗಿದೆ. ದಾಸ ಯಾನೆ ದರ್ಶನ್, ಕಾರ್ತಿಕ್ @ ಸಿಂಗ್, ದೀಪು ಮತ್ತು ಇತರೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/15031