ಸುದ್ದಿಲೈವ್/ಶಿವಮೊಗ್ಗ
ಹಣ ಡ್ರಾ ಮಾಡಿಕೊಳ್ಳಲು ಎಟಿಎಂಗೆ ಹೋದಾಗ ಅಪರಿಚತನೋರ್ವನಿಂದ ಹಲ್ಲೆ ಮತ್ತು ರಾಬರಿ ನಡೆದಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಪ್ರಕಾಶ್ ಎಂಬುವರು ತಮ್ಮಮಗ ಜೆಇಇ ಪ್ರವೇಶ ಪರೀಕ್ಷೆಗೆ ಬರೆಯಲು ಬಂದಿದ್ದು ಬಾಡಿಗೆ ವಾಹನ ಮಾಡಿಕೊಂಡು ಬಂದಿದ್ದರು. ಮಗನಿಗೆ ಪರೀಕ್ಷೆ ಬಿಟ್ಟು ಬಂದ ಪ್ರಕಾಶ್ ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದಿದ್ದರು.
ನಂತರ ಬಾಡಿಗೆ ವಾಹನಕ್ಕೆ ಇಂಧನ ತುಂಬಿಸಲು ಸಾಗರ ರಸ್ತೆಯ ಸ್ಮಶಾನದ ಬಳಿಯಿರುವ ಎಸ್ ಬಿಐ ಎಟಿಎಂಗೆ ಹೋದಾಗ ಅಪರಿಚಿತನೋರ್ವ ಬಂದು 2000 ರೂ. ಬಿಡಿಸಿಕೊಂಡು ಬರುವಂತೆ ದುಂಬಾಲು ಬಿದ್ದಿದ್ದಾನೆ.
2000 ನಾನೇಕೆ ಬಿಡಿಸಲಿ ಎಂದು ತೀರ್ಮಾನಿಸಿ ಪ್ರಕಾಶ್ 500 ರೂ. ಬಿಡಿಸಿಕೊಂಡು ಬಂದಿದ್ದಾರೆ. ಇದನ್ನ ಕಂಡ ಅಪರಿಚಿತ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾನೆ. ಯಾಕೆ ಬೈಯ್ತಿದ್ದೀಯ ಎಂದು ಪ್ರಕಾಶ್ ಕೇಳಿದ್ದಕ್ಕೆ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದಾನೆ.
ನಂತರ ಪ್ರಕಾಶ್ ರನ್ನ ಥಳಿಸಿ ಅವರ ಕೊರಳಿನಲ್ಲಿದ್ದ 1.84 ಲಕ್ಷ ರೂ ಮೌಲ್ಯದ 20 ಗ್ರಾಂ ಚಿನ್ನದ ಸರವನ್ನ ಕಿತ್ತು ಕೊಂಡಿದ್ದು, ನಂತರ ಪ್ರಕಾಶ್ ನಡೆಯಲು ಸಾಧ್ಯವಾಗದೆ ಇದ್ದಾಗ ಬಾಡಿಜೆ ಕಾರು ಚಾಲಕನನ್ನಕರೆಯಿಸಿ ಮೆಗ್ಗಾನ್ ಗೆ ದಾಖಲಾಗಿದ್ದಾರೆ.
ಇದನ್ನೂ ಓದಿ-https://suddilive.in/archives/15666