Girl in a jacket

ಮಳೆ ತಂದ ಅವಾಂತರ

ಸುದ್ದಿಲೈವ್/ಶಿವಮೊಗ್ಗ

ಮಳೆ ಬೀಳಲಿ ಎಂದು ಕಾಯುತ್ತಿದ್ದ ಮಲೆನಾಡಿಗರಿಗೆ ಉತ್ತಮ ಮಳೆಯಾಗಿದೆ. ಮಳೆ ಕೊಂಚ ಹೆಚ್ಚಾದ ಪರಿಣಾಮ ಅವಾಂತರವನ್ನ ಸೃಷ್ಠಿಸಿದೆ‌  ಮಳೆಯ ನೀರು ಮದುವೆ ಛತ್ರಕ್ಕೆ ನುಗ್ಗಿದ ಪರಿಣಾಮ ಛತ್ರದ ಮನೆ ನೀರು ನೀರಾಗಿದೆ.

ಕಳೆದ ರಾತ್ರಿ ಸುರಿದ ಮಳೆಯಿಂದ ಮದುವೆ ನಡೆಯುತ್ತಿದ್ದ ಹಾಲ್ ಗೆ ನೀರು ನುಗ್ಗಿದೆ. ಶಿವಮೊಗ್ಗ ನಗರದ ಗುಡ್ಡೆಕಲ್ ನಲ್ಲಿ ನಿನ್ನೆ ರಾತ್ರಿ ಬಿದ್ದ ಮಳೆ ಮದುವೆ ಮಂಟಪದಲ್ಲಿದ್ದವರಿಗೆ ಹೈರಾಣು ಮಾಡಿದೆ.

ಗುಡ್ಡೆಕಲ್ ದೇವಸ್ಥಾನಕ್ಕೆ ಸೇರಿದ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ತಿಂಡಿ ಮಾಡುವ ವೇಳೆ ನೀರು ನುಗ್ಗಿದೆ. ಊಟದ ಹಾಲ್ ಗೆ ನೀರು ನುಗ್ಗಿ ಕೊಂಚ ಗಲಿಬಿಲಿಗೊಳಿಸಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ, ಮಳೆಯ ನೀರಿನ ನಡುವೆಯೂ ಬೆಳಗಿನ ಉಪಹಾರ ಸೇವನೆ ಮಾಡುವಂತಾಗಿದೆ.

ಇದನ್ಬೂ ಓದಿ-https://suddilive.in/archives/15017

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು