ಸುದ್ದಿಲೈವ್/ಶಿವಮೊಗ್ಗ
ಸರ್ಕಾರಿ ಜಾಗದ ಪಕ್ಕದಲ್ಲಿ ಹರಿಯುವ ಚರಂಡಿ ಮೇಲೆ ಇದ್ದ ಪೆಟ್ಟಿಗೆ ಅಂಗಡಿಯನ್ನ ಎತ್ತಂಗಡಿ ಮಾಡಲಾಗಿದೆ. ಇದು ದೌರ್ಜನ್ಯವೆಂದು ಮಂಜುನಾಥ್ ಅಂಗಡಿ ಮಾಲೀಕ ಆರೋಪಿಸಿದ್ದಾರೆ.
ಸರ್ಕಾರಿ ಜಾಗದ ಚರಂಡಿಯ ಮೇಲೆ ಇಟ್ಟಂತಹ ಗೂಡಂಗಡಿ ಇಟ್ಟು ಜೀವನ ನಡೆಸುತ್ತಿದ್ದವನ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಪಕ್ಕದ ಖ್ಯಾತ ಹೋಟೆಲ್ ನ ಮಾಲೀಕರು ಮತ್ತು ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಧಾವಿಸಿ ಅಂಗಡಿಯನ್ನ ತೆಗೆಸುವಲ್ಲಿ ಆಸಕ್ತಿಹೊಂದಿದ್ದಾರೆ ಎಂದು ಮಾಲೀಕ ಆರೋಪಿಸಿದ್ದಾರೆ.
ಪಾಲಿಕೆ ಅಥವಾ ಯಾವುದೇ ಸರ್ಕಾರಿ ಜಾಗವಿದ್ದರೆ ಸಂಬಂಧಪಟ್ಟ ಇಲಾಖೆಗಳು ಬಂದು ಅಂಗಡಿಗಳನ್ನ ತೆಗೆಸುವುದು ಸರ್ವೇ ಸಾಮಾನ್ಯ. ಅದರೆ ಸಣ್ಣಪುಟ್ಟ ಅಂಗಡಿ ಖಾಲಿ ಮಾಡಿಸಲು ಕಾಂಗ್ರೆಸ್ ನಾಯಕರು ಮುಂದಾಗ್ತಾರೆ ಎಂದರೆ ಎಂತಹ ದೌರ್ಭಾಗ್ಯ ಮತ್ತು ಲಜ್ಜೆಗೆಟ್ಟ ರಾಜಕಾರಣಿ ಇರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗೋಪಾಳದ ಪ್ರಖ್ಯಾತ ಹೋಟೆಲ್ ವಿಧಾತ್ರಿ ಹೋಟೆಲ್ ಪಕ್ಕದಲ್ಲಿ ಮಂಜುನಾಥ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಬಡಪಾಯಿಯ ಮೇಲೆ ಬರೆ ಎಳೆಯಲಾಗಿದೆ. ಎನ್ನಲಾಗಿದೆ. ಬಂಡವಾಳಶಾಹಿ ಜೊತೆ ಸೇರಿ ರಾತ್ರಿ ಹೊತ್ತು ಕಾಂಗ್ರೆಸ್ ನಾಯಕರು ಪೌರುಷ ತೋರಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ-https://suddilive.in/archives/14878