Girl in a jacket

ಲಷ್ಕರ್ ಮೊಹಲ್ಲಾದಲ್ಲಿ ಡಬ್ಬಲ್ ಮರ್ಡರ್

ಸುದ್ದಿಲೈವ್/ಶಿವಮೊಗ್ಗ

ನಡು ರಸ್ತೆಯಲ್ಲಿ ಇಬ್ಬರನ್ನ ಕೊಲೆ ಮಾಡಲಾಗಿದೆ. ಲಷ್ಕರ್ ಮೊಹಲ್ಲಾದ ಮಟನ್ ಸ್ಟಾಲ್ ವೊಂದರ ಎದುರು ಡಬ್ಬಲ್ ಮರ್ಡರ್ ಮಾಡಲಾಗಿದ್ದು ಇಬ್ವರೂ ಸಹ ರೌಡಿ ಶೀಟರ್ ಎಂದು ಮೂಲಗಳು ತಿಳಿಸಿದೆ.

ಲಷ್ಕರ್ ಮೊಹಲ್ಲಾದಲ್ಲಿ ಶೋಹೆಬ್ ಮತ್ತು ಗೌಸ್ ಎಂಬುವರ ಕೊಲೆಯಾಗಿದೆ ಎಂದು ತಿಳಿದು ಬಂದಿದೆ. ಇವರಿಬ್ವರು ಎಂಕೆಕೆ ರಸ್ತೆಯ ನಿವಾಸಿಗಳಾಗಿದ್ದಾರೆ. ಡಬ್ಬಲ್ ಮರ್ಡರ್ ಗೆ ಕೆಲವೊಂದಿಷ್ಟು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಲಷ್ಕರ್ ಮೊಹಲ್ಲಾಗೆ ಬೈಕ್ ನಲ್ಲಿ‌ ಬರುತ್ತಿದ್ದಾಗ  ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಅಟ್ಯಾಕ್ ಮಾಡಿದ್ದಾರೆ. ನಂತರ ಕಲ್ಲು ಎತ್ತಾಕಿ ಸಾಯಿಸಿರುವುದಾಗಿ ತಿಳಿದು ಬಂದಿದೆ.ಕೊಲೆ ಮಾಡಿದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ನೆನ್ಬೆ ಯಾಸಿನ್ ಜೊತೆ ಮೃತಪಟ್ಟ ಯುವಕರೊಂದಿಗೆ ಗಲಾಟೆಯಾಗಿದೆ.  ಯಾಸಿನ್ ಆಸ್ಪತ್ರೆಗೆ ಸೇರಿರುವುದಾಗಿ ತಿಳಿದು ಬಂದಿದೆ. ಇಂದು ಇಬ್ವರು ಜನತಾ ಮಟನ್ ಬಳಿ ಬರುತ್ತಿದ್ದಂತೆ ಅಟ್ಯಾಕ್ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.  ಹಾಡುಹಗಲಲ್ಲೇ ನಡೆದ ಹತ್ಯೆಯ ಬಗ್ಗೆ ಲಷ್ಕರ್ ಮೊಹಲ್ಲಾ‌ಬೆಚ್ಚಿ ಬಿದ್ದಿದೆ. ಕೋಟೆ ಪೊಲೀಸರು ಸ್ಥಳಕ್ಕೆ ದಾವಿಸಿದ್ದಾರೆ.

ಇದನ್ನೂ ಓದಿ-https://suddilive.in/archives/14486

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು