Girl in a jacket

ಈಶ್ವರಪ್ಪನವರ ನೀಡಿದ್ದ ದೂರಿಗೆ ಎಫ್ಐಆರ್ ದಾಖಲು

ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ಈಶ್ವರಪ್ಪನವರು ಮೇ.7 ರಂದು ನೀಡಿದ್ದ ದೂರನ್ನ ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿದೆ. ಲೋಕಸಭಾ ಚುನಾವಣೆಯ ಮತದಾನದ ದಿನದಂದು ಬೆಳಿಗ್ಗೆನೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರರ ಪರ ಈಶ್ವರಪ್ಪನವರು ಮತಯಾಚಿಸಿದ ವಿಡಿಯೋವೊಂದು ವೈರಲ್ ಆಗಿತ್ತು.

ವಿಡಿಯೋ ವೈರಲ್ ಆದ ಬೆನ್ನಲ್ಲೇ, ಈಶ್ವರಪ್ಪನವರು ಕೆಂಡಮಂಡಲರಾಗಿದ್ದರು,‌ ಇಂತಹ ವಿಡಿಯೋವನ್ನ ರಾಘವೇಂದ್ರರಿಂದಲೇ ನಡೆದಿದ್ದು ಎಂದು ಆರೋಪಿಸಿದ್ದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆ. ಈ ಉಲ್ಲಂಘನೆಯ ಬೆನ್ನಲ್ಲೇ ಅಂದು ಮಧ್ಯಾಹ್ನವೇ ಈಶ್ವರಪ್ಪನವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಅಂದು ಸಂಜೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ.ಅವರನ್ನ ಭೇಟಿಯಾಗಿ ದೂರು ದಾಖಲಿಸಿದ್ದರು‌. ರಾಘವೇಂದ್ರರ ಪರ ಮತಯಾಚಿಸಿದ ವಿಡಿಯೋವನ್ನ ಹರಿಬಿಟ್ಟವರ ಮೂಲಪರಿಶೀಲಿಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸುವಂತೆ ಮನವಿ ಮತ್ತು ವಿಡಿಯೋವನ್ನ‌ಪೆನ್ ಡ್ರೈವ್ ಮೂಲಕ ದಾಖಲೆ ನೀಡಿದ್ದರು.

ಈ ವಿಡಿಯೋ ವೈರಲ್ ಕುರಿತು ಈಶ್ವರಪ್ಪನವರು ಒಂದು ವಾರದ ಒಳಗೆ ಕ್ರಮ ಜರುಗಿಸಬೇಕು. ಅದರಲ್ಲೂ ಸಂಸದ ರಾಘವೇಂದ್ರರ ವಿರುದ್ಧವೇ ಕ್ರಮ ಜರುಗಿಸಬೇಕು ಎಂದು ಸುದ್ದಿಗೋಷ್ಠಿ ಮೂಲಕ ಆಗ್ರಹಿಸಿದ್ದರು‌. ಇದೇ ವೇಳೆ ಈಶ್ವರಪ್ಪನವರು ರಾಘವೇಂದ್ರರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದರು.

ಆದರೆ ರಾಘವೇಂದ್ರರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ ಬದಲಿಗೆ ಅಪರಿಚಿತ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು