ಸುದ್ದಿಲೈವ್/ತೀರ್ಥಹಳ್ಳಿ
ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ಮಂದಾರ್ತಿ ಗ್ಯಾಂಡ್ ಹೋಟೆಲ್ ಎದುರು ನಿಲ್ಲಿಸಿದ್ದ ಟ್ರಿಪ್ಪರ್ ಗೆ ಕ್ಯಾಂಟರ್ ವೊಂದು ಡಿಕ್ಕಿ ಹೊಡೆದಿದ್ದು, ಓರ್ವ ಸಾವು ಕಂಡಿರುವ ಘಟನೆ ಇಂದು ನಡೆದಿದೆ.
ತೀರ್ಥಹಳ್ಳಿಯ ದೊಡ್ಡಮ್ಮನ ಕೇರಿಯ ನಿವಾಸಿ ಸಲ್ಮಾನ್ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಹೋಟೆಲ್ ಎದುರು ನಿಂತಿದ್ದ ಟ್ರಿಪ್ಪರ್ ಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಒಳಗೆ ಮಲಗಿದ್ದ ಸಲ್ಮಾನ್ ಸಾವು ಕಂಡಿದ್ದಾರೆ.
ಚಾಲನ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ ಎನ್ನಲಾಗಿದ್ದು, ಚಾಲಕನಿಗೂ ಈ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ. ಅವರನ್ನ ಮಣಿಪಾಲ್ ಸಾಗಿಸಲಾಗಿದೆ. ಪ್ರಕರಣ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ-https://suddilive.in/archives/14583
Tags:
ಕ್ರೈಂ ನ್ಯೂಸ್