Girl in a jacket

ಮೋದಿ ಫೊಟೊ ಬಳಕೆ ವಿಚಾರದಲ್ಲಿ ಬಿಜೆಪಿಗೆ ಮುಖಭಂಗವಾಗಿದೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ವಿಶ್ವನಾಯಕ ನರೇಂದ್ರ ಮೋದಿ ನನ್ನ ಜೊತೆ ಉಳಿದಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಫೋಟೊ‌ಬಳಕೆ ವಿರುದ್ದ ಬಿಜೆಪಿ ನ್ಯಾಯಾಲಯ ಹಾಗೂ ಚುನಾವಣೆ ಆಯೋಗಕ್ಕೆ ಹೋಗಿತ್ತು. ಮೋದಿ ಫೋಟೊದಲ್ಲಿ ಮಾತ್ರ ಇಲ್ಲ ನನ್ನ ಹೃದಯದಲ್ಲಿದ್ದಾರೆ. ಬಿಜೆಪಿ ಮೋದಿ ಫೋಟೊ ನನ್ನದು ಎಂದು ಹೇಳಿಕೊಂಡು ನ್ಯಾಯಾಲಯಕ್ಕೆ ಹೋಗಿ ಅಪಮಾನ ಮಾಡಬಾರದಿತ್ತು ಎಂದರು.

140 ಕೋಟಿ ಜನ‌ ಮೋದಿ ಫೋಟೊ ಬಳಕೆ ಮಾಡಲು ನ್ಯಾಯಾಲಯ ಹೇಳಿದೆ. ಗಣಪತಿ ಫೊಟೊ ವನ್ನ ಬಳಸಬೇಡಿ ಎಂಬುದು ಅರ್ಥಹೀನವಾಗಿದೆ. ಅದೇ ರೀತಿ ಮೋದಿ ಫೋಟೊ ಬಳಕೆಯಾಗಿದೆ. ಮುಂದಿನ ದಿನಗಳಲ್ಲಿ ಕೇವಲ ಫೊಟೋ ಬಳಕೆ ಮಾತ್ರ‌ಅಲ್ಲ ಅವರ ಆದರ್ಶವನ್ನ ಬಳಸಿಕೊಂಡು ಜನರಿಗೆ ತಿಳಿಸುವುದಾಗಿ ಭರವಸೆ ನೀಡಿದರು.

ನ್ಯಾಯಾಲಯದಲ್ಲಿ ಮೋದಿ ಫೋಟೊ‌ ಬಳಕೆ ಕುರಿತು ತೀರ್ಪು ಬಂತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ನನ್ನಿಂದ ಮೋದಿಯನ್ನ ಅಗಲಿಸಲು ಯಾರಿಗೂ ಸಾಧ್ಯವಿಲ್ಲ. ಅಯೋಧ್ಯ ರಾಮ‌ಮಂದಿರ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮೊದಲು ದಿನಾಂಕ ಸಿಗ್ತು ನಂತರ ನ್ಯಾಯ ಸಿಗ್ತು. ಹಾಗೆ ಮೋದಿ ಫೋಟೊ ಬಳಕೆ ವಿಚಾರದಲ್ಲಿ ನಡೆದಿದೆ. ಬಿಜೆಪಿಯ ಚಿಂತನೆಗೆ ಹಿನ್ನಡೆಯಾಗಿದೆ. ಮೋದಿ ಫೋಟೊ ಬಳಕೆಯಲ್ಲಿ ಯಾರು ನ್ಯಾಯಾಲಯಕ್ಕೆ ಹೋಗಬಾರದು ಎಂದರು.

ಶಿರಾಳಕೊಪ್ಪದಲ್ಲಿ ವ್ಯಬಸ್ಥಿತವಾಗಿ ಸಂಸದ ರಾಘವೇಂದ್ರ ಮತ್ತು ಮಾಜಿ ಸಿಎಂ ಬಿಎಸ್ ವೈ ನಿನ್ನೆ ನಡೆದ ಸಾರ್ವಜನಿಕ ಸಭೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಭಾಷಣಕ್ಕೆ ಅನುಮತಿ ಪಡೆಯಲಾಗಿತ್ತು. ಆದರೆ ಕೆಲ ಗೂಂಡಾಗಳು ಸಭೆಗೆ ಅಡ್ಡಿಪಡಿಸಿದ್ದಾರೆ.

ಸ್ವಾತಂತ್ರ್ಯ ರಾಜ್ಯದಲ್ಲಿ ನಾವು ಇದ್ದೀವಾ ಅಥವಾ ಗೂಂಡಾ ರಾಜ್ಯದಲ್ಲಿದ್ದೀವಾ ಎಂಬ ಗೊಂದಲ ನಿರ್ಮಿಸಿದ್ದಾರೆ. ನಂತರ ಮಹಿಳೆಯರು ಸಭೀಕರು ಡಬ್ಬಲ್ ರಸ್ತೆಯ ಪಕ್ಕ ನಿಂತು ಕಾರ್ಯಕ್ರಮ ವೀಕ್ಷಿಸಿದ್ದಾರೆ ಬೆಂಬಲ ಸೂಚಿಸಿದ್ದಾರೆ. ದೇವಸ್ಥಾನದ ಜಾಗದಲ್ಲಿಯೂ ಅನುಮತಿ ನೀಡಿದ್ದರು. ನಂತರ ಯಡಿಯೂರಪ್ಪನವರ ಕಡೆಯವರು ಕೋಟಿ ಹಣ ನೀಡಿ ಅಡ್ಡಿಪಡಿಸಲಾಗಿತ್ತು ಎಂದು ಈಶ್ವರಪ್ಪ ಆರೋಪಿಸಿದರು.

ಚುನಾವಣ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಇಡೀ ಶಿಕಾರಿಪುರತಾಲೂಕಿನಲ್ಲಿ ಭಯಭೀತಿ ವಾತಾವರಣವಿದೆ.‌ ಜನ ಆರಂಭದಲ್ಲಿ ಸ್ವಲ್ಪ ಸ್ವಲ್ಪ ಬಂದು ನಂತರ ದೊಡ್ಡಮಟ್ಟದಲ್ಲಿ ಸೇರರು. ಬಿಜೆಪಿ, ಕಾಂಗ್ರೆಸ್ ನವರಿಗೂ ರಾಘವೇಂದ್ರ ಮತ್ತು ಗೀತ ವಿರುದ್ಧ ಆಕ್ರೋಶವಿದೆ. ಅನೇಕರು ಬೆಂಬಲಿಸುತ್ತಿದ್ದಾರೆ. ನಿನ್ನೆ ಶಿರಾಳಕೊಪ್ಪದಲ್ಲಿ ಆದ ಘಟನೆ ಬಗ್ಗೆ ಬಿಎಸ್ ಯಡಿಯೂರಪ್ಪ ಮತ್ತು ರಾಘವೇಂದ್ರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ನಾನು ಸೌಜನ್ಯದಿಂದ ಮಾತನಾಡಿದ್ದಾರೆ. ಭೀತಿ ಬಿಟ್ಟು ಭಾಷಣ ಕೇಳಿದ್ದಾರೆ. ಗೂಂಡಾಗಿರಿಗೆ ಕಂಪ್ಲೇಟ್ ಅಲ್ಲ ಜ‌ರ ಉತ್ತರ ಮತಗಳ ಮೂಲಕ ಆಗಬೇಕಿದೆ. ಚುನಾವಣೆ ಸಹ ಶಾಂತಿ ರೀತಿಯಲ್ಲಿ ನಡೆಯಬೇಕು. ಯಡಿಯೂರಪ್ಪ ಯಾವತ್ತೂ ಹೀಗೆ ಮಾಡಿರಲಿಲ್ಲ. ಮಗ ಸೋಲುವ ಭೀತಿಯಿಂದ ಹೀಗೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ-https://suddilive.in/archives/14011

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು