ಸುದ್ದಿಲೈವ್/ಶಿಕಾರಿಪುರ/ಶಿವಮೊಗ್ಗ
ಶಿಕಾರಿಪುರದಲ್ಲಿ ಚುನಾವಣೆ ಸಂಬಂಧ ಆರಂಭಿಸಲಾಗಿದ್ದ ಈಶ್ವರಪ್ಪನವರ ಕಚೇರಿ ಮುಂದೆ ವಾಮಾಚಾರ ನಡೆಸಲಾಗಿದೆ.
ರಾಷ್ಟ್ರಭಕ್ತರ ಬಳಗದ ಶಿಕಾರಿಪುರ ಕಚೇರಿಯ ಬಾಗಿಲಿನ ಮುಂದೆ ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿ ಹಲವು ವಸ್ತು ಪತ್ತೆಯಾಗಿದೆ. ಕಳೆದ ರಾತ್ರಿ ವಾಮಾಚಾರ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂಈಶ್ವರಪ್ಪ, ರಾಷ್ಟ್ರಭಕ್ತರ ಬಳಗದ ಕಚೇರಿಯ ಮುಂದೆ ವಾಮಾಚಾರ ನಡೆದಿದೆ. ಬೆಳಿಗ್ಗೆ ಗೊತ್ತಾಗಿದೆ. ಜನರಿಂದ ತಿರಸ್ಕಾರಗೊಳ್ಳುವ ಭೀತಿಯಿಂದ ಬಿಎಸ್ ವೈ ಕುಟುಂಬ ವಾಮಾಚಾರದಂತ ಅಸಹ್ಯ ಕೃತ್ಯ ನಡೆದಿದೆ. ಧರ್ಮ ಮತ್ತು ದೇವರು ನನ್ನ ಜೊತೆ ಇದೆ. ವಾಮಾಚಾರ ಮಾಡುವ ಯಡಿಯೂರಪ್ಪನವರ ವಿರುದ್ಧ ಗೆಲ್ಳಿದ್ದೇನೆ. ಬಾಗಿಲ ಮುಂದಿನ ಅರಸಿನಮತ್ತು ಕುಂಕುಮ ಹಾಗೂ ಹಲವು ವಸ್ತುಗಳನ್ನ ತೆರವುಗೊಳಿಸಲು ಹೇಳಿದ್ದೇನೆ ಎಂದರು.
ಈ ಹಿಂದೆ ವಿಧಾನ ಸಭಾ ಚುನಾವಣೆಯ ವೇಳೆ ಸಂಸದ ರಾಘವೇಂದ್ರ ಅವರ ತೋಟದ ಮನೆಯಲ್ಲಿ ಪುನಗುಬೆಕ್ಕನ್ನ ಸಾಯಿಸಿ ವಾಮಾಚಾರ ನಡೆಸಿರುವ ಆರೋಪ ಕೇಳಿ ಬಂದಿತ್ತು. ಶಿಕಾರಿಪುರದಲ್ಲಿ ರಾಜಕಾರಣಿಗಳಿಗೆ ವಾಮಾಚಾರ ಹೊಸದಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ-https://suddilive.in/archives/14001