ಸುದ್ದಿಲೈವ್/ಭದ್ರಾವತಿ
ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಸುರೇಶ್ ಯಾನೆ ಲಾಟರಿ ಸೂರಿ ಮನೆಯ ಮೇಲೆ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳ ವಿರುದ್ಧ ಲಾಟರಿ ಸೂರಿ ರಂಪಾಟ ನಡೆಸಿದ್ದಾನೆ.
ದೂರಿನ ಆಧಾರದ ಮೇಲೆ ಸಹಕಾರ ಸಂಘಗಳ ಇಲಾಖೆಯ ಸಹಾಯಕ ನಿಬಂಧಕರು ಲಾಟರಿ ಸೂರಿ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಯುವ ವೇಳೆ ಸುಮ್ಮನೆ ಕುಳಿತಿದ್ದ ಸೂರಿ ಪ್ರಭಾವಿ ನಾಯಕನ ರಂಗ ಪ್ರವೇಶವಾದಾಗ ಕೆಂಡಮಂಡಲನಾಗುತ್ತಾನೆ.
ಪ್ರಭಾವಿ ನಾಯಕನ ರಂಗಪ್ರವೇಶದೊಂದಿಗೆ ಅಧಿಕಾರಿಗಳ ಗುರುತಿನ ಚೀಟಿ ಕೇಳಲಾಗುತ್ತದೆ. ಅಧಿಕಾರಿಗಳು ನಾಳೆ ಬರುವುದಾಗಿ ಹೇಳಿದ್ದಾರೆ. ಪ್ರಭಾವಿ ನಾಯಕನ ರಂಗ ಪ್ರವೇಶದಿಂದಾಗಿ ಉತ್ತೇಜನಗೊಂಡ ಲಾಟರಿ ಸೂರಿ ದಾಳಿ ನಡೆಸಿದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಾನೆ.
ಇದರಿಂದ ಕುಪಿತಗೊಂಡ ಸಹಾಯಕ ನಿಬಂಧಕರು ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಎಂದು ದೂರು ದಾಖಲಿಸಿದ್ದಾರೆ. ಇವಿಷ್ಟು ಘಟನೆಗಳು ನಿನ್ನೆ ರಾತ್ರಿ ನಡೆದಿದೆ. ಭದ್ರಾವತಿಯಲ್ಲಿ ಅಕ್ರಮದಂಧೆಗಳ ಹಾವಳಿ ಹೆಚ್ಚಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಅಧಿಕಾರಿಗಳ ದಾಳಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ-https://suddilive.in/archives/14892