Girl in a jacket

ಬಿಎಸ್ ವೈ ಕುಟುಂಬ ಹಡಬ್ಬೆ ಹಣ ತಂದು ಸುರಿಯಲಿ, ನಾವು ನೋಡ್ತೀವಿ ಸರ್ಕಾರ ಹೇಗೆ ಬೀಳುತ್ತೆ ಅಂತ-ಬೇಳೂರು ಸವಾಲು

ಸುದ್ದಿಲೈವ್/ಶಿವಮೊಗ್ಗ

ಪೆನ್ ಡ್ರೈವ್ ಮತ್ತು ಸರ್ಕಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲುವುದಾಗಿ ಬಿಎಸ್ ವೈ ಹೇಳಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಆಗದ ಬಿಜೆಪಿಗೆ ಕೊನೆಗೂ ಕನಿಷ್ಠ ಸ್ಥಾನ‌ಪಡೆಯಲು ಸಾಧ್ಯವಾಗಿದ್ದು 110 ಸ್ಥಾನ ಅಷ್ಟೆ ಎಂದು ಶಾಸಕ‌ ಗೋಪಾಲ ಕೃಷ್ಣ ಬೇಳೂರು ಡಿಚ್ಚಿ ಹೊಡೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 28 ಕ್ಕೆ 28 ಸ್ಥಾನ ಬಿಜೆಪಿ ಗೆದ್ದರೆ ರಾಜೀನಾಮೆ ನೀಡುವೆ. ನೀವು ನಿಮ್ಮ ಮಗ ರಾಜಕೀಯ ನಿವೃತ್ತಿ ಘೋಷಿಸುತ್ತೀರಾ ಎಂದು ಸವಾಲು ಹಾಕಿದ್ದಾರೆ. ಸಂಸದ ರಾಘವೇಂದ್ರ ತನಗೆ ಮತ ಕೇಳಿಲ್ಲ. ಆದರೆ ಮೋದಿಗೆ ಮತಕೇಳಿದ್ದಾರೆ. ಶಿಕಾರಿಪುರಕ್ಕೆ ಹಡಬ್ಬೆ ದುಡ್ಡು ತಂದು ಅಭಿವೃದ್ಧಿ ಮಾಡಿದ್ದು ಬಿಟ್ಟರೆ ಈ ಅಪ್ಪಮಕ್ಕಳು ಇತರೆ ತಾಲೂಕು ಅಭಿವೃದ್ಧಿ ಮಾಡಲಿಲ್ಲ. ನಿಷ್ಕ್ರಿಯ ಕೆಲಸ ಮಾಡಿ ಮತ ಕೇಳಿದ್ದಾರೆ. ಯುವಕರು ಸಹ ಮೋದಿ ಹೆಸರು ಎತ್ತುತ್ತಿಲ್ಲ. ಕಾರಣ ಮೋದಿ ಮೋಸ ಮಾಡಿದ್ದಾರೆ ಎನ್ನುತ್ತಿದ್ದಾರೆ ಎಂದು ದೂರಿದರು.‌

ಸಂಸದ ರಾಘವೇಂದ್ರ ಚುನಾವಣೆ ಸಂದರ್ಭದಲ್ಲಿ ಬಳೆತೊಟ್ಟುಕೊಂಡಿಲ್ಲ ಎಂದು ಸಾಗರದಲ್ಲಿ ಹೇಳಿದ್ದಾರೆ. ಸರ್ಕಾರ ಉರುಳಿಸುವ ಬಗ್ಗೆ ಮಾತನಾಡಿದ್ದಾರೆ. ಕುಮಾರ ಸ್ವಾಮಿಗೂ ಮತ್ತು ಸಂಸದರಿಗೆ ಧಮ್ ಇದ್ದರೆ ಸರ್ಕಾರ ಉರುಳಿಸಿ ನೋಡೋಣ ಎಂದು ಸವಾಲು ಹಾಕಿದರು. ಹಿಂದಿನ ಸಲ 17 ಜನ ಮುಠಾಳರು ಪಕ್ಷ ಬಿಟ್ಟು ಬಿಜೆಪಿಗೆ ಹೋಗಿದ್ದಾರೆ. ಈ ಬಾರಿ ಅಙತಹವರಿಲ್ಲ. ಹಡಬ್ವೆ ಹಣ ತಂದು ನಿಲ್ಲಿ ನೋಡೋಣ ಎಂದು ಆಗ್ರಹಿಸಿದರು.

ಹಡಬ್ಬೆ ದುಡ್ಡು ತಂದು ಧಮ್ಮು ತಾಕತ್ತು ಇದ್ದರೆ ಉರುಳಿಸಿ ನೋಡೋಣ. ಬಿಜೆಪಿ ಸರ್ಕಾರ ಉತುಳಿಸುವ ಬಗ್ಗೆಲ ಗಾಸಿಪ್ ಮಾಡ್ತಾ ಇದ್ದಾರೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ 1 ಲಕ್ಷ ಲೀಡಿನಲ್ಲಿ ಗೆಲ್ತಾರೆ ಎಂದರು.

ಶಿವಮೊಗ್ಗದ ಶಾಹೀ ಗಾರ್ಮೆಂಟ್ಸ್ ಗೆ ಕೊಟ್ಟ 285 ಎಕರೆ ನೀಡಿರುವುದು ಸರ್ಕಾರದ್ದು. 10 ಎಕರೆ ನೀಡದೆ 285 ಎಕರೆಯನ್ನ ನೀಡಲಾಗಿದೆ. ಕೋಟಿ ಗಟ್ಟಲೆ ಮಾರ್ಕೆಟ್ ದರ ಇರುವುದನ್ನ 10 ಸಾವಿರ ಚದರ ಅಡಿಗೆ ಮಾರಾಟ ಮಾಡಲಾಗಿದೆ. ಇದು ತನಿಖೆ ಆಗಬೇಕು. ಡಿಸಿಸಿ ಬ್ಯಾಂಕ್ ಹಗರಣ ಆಗಬೇಕು. ಇದು ಆಗಲಿಲ್ಲ ಎಂದರೆ ರಾಜೀನಾಮೆ ನೀಡುವೆ ಎಂದರು.

ಡಿಸಿಸಿ ಬ್ಯಾಂಕ್ ನೇಮಕದಲ್ಲಿ ಅಭ್ಯರ್ಥಿಗಳಿಗೆ ಸಾಲ ಕೊಡಿಸಿ ಕೆಲಸ ನೀಡಿದ್ದಾರೆ. ಸರ್ಕಾರ ತನಿಖೆ ಮಾಡಲಿಲ್ಲ ಎಂದರೆ ರಾಜೀನಾಮೆ ನೀಡುವೆ. ಇದನ್ನ ವಿಧಾನ ಸಭೆಯಲ್ಲಿ ಪ್ರತಿಭಟಿಸುವೆ. ಮುಖ್ಯಮಂತ್ರಿಗಳು ಶಾಹೀ ಗಾರ್ಮೆಂಟ್ಸ್ ತನಿಖೆ ಮಾಡೊಲ್ಲ ಎಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದರು.

ಎಸ್ ಸಿ ಜೆಡ್ ನಲ್ಲಿ ಕೊಟ್ಟ ಭೂಮಿಯನ್ನ ಈಗ ಹೇಗೆ ಪ್ರತಿಭಟಿಸುತ್ತೀರಿ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಶಾಸಕರು ಯಾವಗಲಾದರೂ ಹೋರಾಟ ಮಾಡಲು ಅವಕಾಶವಿದೆ. ಇದರಲ್ಲಿ ನೂರಾರು ಕೋಟಿ ಹಣ ಹೊಡೆದಿರುವ ವಾಸನೆ ಇದೆ. ಬಿಎಸ್ ವೈ ಮತ್ತು ಕುಟುಂಬ ಕಡಿಮೆ ದರಕ್ಕೆ ಭೂಮಿ ನೀಡಿ ಗುಳುಂ ಮಾಡಿದ್ದಾರೆ. ಶಾಹೀ ಗಾರ್ಮೆಂಟ್ಸ್ ಬಗ್ಗೆ ವರದಿ ತೆಗೆದುಕೊಂಡು ಕುಳಿತುಕೊಳ್ಳುವೆ ಎಂದರು.

ಪೆನ್ ಡ್ರೈವ್ ಸದ್ದು ಮಾಡಿದ್ದು ವಿಶ್ವವ್ಯಾಪಿ ಹೋಗಿದೆ. ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಹಿಡಿದು ವಿಧಾನ ಸಭೆಯಲ್ಲಿ ಹೆದುರಿಸುತ್ತಿರುವುದಾಗಿ ಅನುಮಾನ ವ್ಯಕ್ತಪಡಿಸಿದರು.

ಈಗ ಪೆನ್ ಡ್ರೈವ್ ಮಾಡಿದವರನ್ನ ಅಂದರ್ ಮಾಡಿ ಎಂದಿದ್ದರು. ಗ್ಯಾರೆಂಟಿಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಕುಮಾರ ಸ್ವಾಮಿ ಹೇಳುತ್ತಿದ್ದರು. ಈಗ ದಾರಿ ತಪ್ಪಿದ್ದು ಯಾರು? ಪ್ರಜ್ವಲ್ ರೇವಣ್ಣ ದಾರಿ ತಪ್ಪಿಹೋಗಿದ್ದಾರೆ ಎಂದರು.

ನೇಹಾ ಕೊಲೆ ಪ್ರಕರಣವನ್ನ ಬಿಂಬಿಸುವ‌ ಬಿಜೆಪಿ ಹರ್ಷ ಮತ್ತು ನೆಟ್ಟಾರು ಕೊಲೆಯಾದಾಗ‌ ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ನಮ್ಮ ಸರ್ಕಾರ ಗಟ್ಟಿ ಇದೆ. ನಿಮ್ಮ ಹಡಬಿ ದುಡ್ಡು ಎಷ್ಟು ಇದೆ ತನ್ನಿ ನೋಡೋಣ, ನೀವು ಯಾರ ಮೂಲಕ ಸರ್ಕಾರ ಉರುಳಿಸುತ್ತೀರಿ? ಶಿಂಧೆ, ಬಿಎಸ್ ವೈ ಯಾರನ್ನ‌ ಕರ್ಕೊಂಡು ಬರ್ತೀರೋ ಬನ್ನಿ ಈ ಬಾರಿ ಚಳಿ ಬಿಡುಸುವುದು ನಮಗೂ ಗೊತ್ತಿದೆ ಎಂದರು ಆರೋಪಿಸಿದರು.

ಸರ್ಕಾರ ಪ್ರಜ್ವಲ್ ರೇವಣ್ಣ ಹಿಡಿದು ತರುವಲ್ಲಿ ವಿಫಲವಾಗಿದೆ. ಇದನ್ನ ಖಂಡಿಸುವೆ. ಸಿಬಿಐಗೆ ಕೊಡಲು ಈ ಪ್ರಕರಣ ಅಂತಹ ಅರ್ಹತೆ ಪಡೆದುಕೊಂಡಿಲ್ಲ. ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ನನ್ನ ಕ್ಷೇತ್ರಕ್ಕೆ ಬಂದಿದೆ. ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಅಪಪ್ರಚಾರ ಬಿಟ್ಟು ಬಿಹೆಪಿಗೆ ಬೇರೆ ಕೆಲಸವೇನಿದೆ ಎಂದು ಪ್ರಶ್ನಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು