ಸುದ್ದಿಲೈವ್/ಶಿವಮೊಗ್ಗ
ಇಡೀ ಮುಸ್ಲಿಂ ಸಮುದಾಯದ ಜಾಗೃತವಾಗಿದೆಅತಿ ಹೆಚ್ಚು ಮುಸ್ಲಿಮರ ಈ ಬಾರಿ ಮತದಾನ ಮಾಡಿದ್ದಾರೆ.ಇದನ್ನು ಹಿಂದೂ ಸಮಾಜ ಗಮನಿಸಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಸಮಾಜವನ್ನು ಜಾತಿ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳು ಹೊಡೆಯುತ್ತಿದೆ. ಮುಸ್ಲಿಂ ಸಮುದಾಯದ ಒಂದಾಗಿದೆ ಮತದಾನ ಮಾಡಿದ್ದು ಈ ಬಾರಿಯ ವಿಶೇಷವಾಗಿದೆ. ಎಲ್ಲಾ ಸಮುದಾಯಗಳು ನನಗೆ ಬೆಂಬಲ ನೀಡಿದೆ ಎಂದರು.
ಭಾರತೀಯ ಜನತಾ ಪಾರ್ಟಿ ಶುದ್ಧೀಕರಣ ಮಾಡಲು ನನಗೆ ಮತಹಾಕಿದ್ದಾರೆ. ಕಾಂಗ್ರೆಸ್, ಬಿಜೆಪಿ ಜಾತಿ ಹೆಸರಲ್ಲಿ ಚುನಾವಣೆ ಮಾಡಿದೆ. ನನ್ನ ವಿಚಾರ ಈ ಚುನಾವಣೆಯಲ್ಲಿ ಯಶಸ್ವಿಯಾಗಿದೆ. ನಾನು ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂದರು
ರಾಘವೇಂದ್ರರ ವಿರುದ್ಧ ಕ್ರಮ ಕೈಗೊಳ್ಳಲು ಒಂದು ವಾರ ಗಡುವು
ಈ ಚುನಾವಣೆಯಲ್ಲಿ ರಾಘವೇಂದ್ರ ಅವರಿಂದ ಷಂಡ್ಯತರ ನಡೆದಿದೆ. ವಾಮಾಚಾರ ಮಾಡಿದ್ದಾರೆ, ಸಭೆ ನಡೆಸಲು ಬಿಡದೆ ಇರುವ ಕೆಲಸ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ವಿಡಿಯೋ ಮಾಡಿದ್ದಾರೆ. ನನ್ನ ಪರವಾಗಿ ಬಿಜೆಪಿಗೆ ಮತ ಹಾಕಿ ಎನ್ನುವ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ ಎಂದ ಅವರು ಈ ಬಗ್ಗೆ ಡಿಸಿ,ಎಸ್ಪಿಗೆ ನಾನು ದೂರು ನೀಡಿದ್ದೇನೆ ಎಂದರು.
ಈ ಸುಳ್ಳು ಸುದ್ದಿಯಿಂದ ನನಗೆ ಅನೇಕ ವೋಟ್ ಅನ್ಯಾಯ ಆಗಿದೆ. ನನಗೆ ವೋಟ್ ಮಾಡಲು ಬಂದವರಿಗೆ ಗೊಂದಲ ಆಗಿದೆ. ಸುಳ್ಳು ಸುದ್ದಿಯಿಂದ ನನಗೆ ಮತದಾನ ಕಡಿಮೆ ಆಗಿದೆ. ಇದು ರಾಘವೇಂದ್ರ ಅವರ ಕುತಂತ್ರ, ಷಡ್ಯಂತರವಾಗಿದ್ದರಿಂದ, ತತಕ್ಷಣ ಸಂಸದ ರಾಘವೇಂದ್ರ ಅವರನ್ನು ಅರೆಸ್ಟ್ ಮಾಡಬೇಕು ಎಂದರು
ಒಂದು ವಾರ ಗಡುವು ನೀಡುತ್ತೇನೆ. 15 ನೇ ತಾರೀಖಿನೊಳಗೆ ಕ್ರಮ ಕೈಗೊಳ್ಳದೆ ಹೋದ್ರೆ ಹೋರಾಟ ಮಾಡುತ್ತೇವೆ. ಕಳ್ಳ ಕಳ್ಳತನವನ್ನ ಒಪ್ಪಿಕೊಳ್ಳುತ್ತಾನಾ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ರಾಘವೇಂದ್ರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದರು.
ಜಾತಿ ಮೇಲೆ ಅಲ್ಲಾ ಹಿಂದೂತ್ವದ ಮೇಲೆ ನಾನು ಗೆಲ್ಲುತ್ತೇನೆ ಎಂದು ಸಹ ಅವರು ನುಡಿದಿದ್ದಾರೆ.
ಇದನ್ನೂ ಓದಿ-https://suddilive.in/archives/14512