ಸುದ್ದಿಲೈವ್/ಶಿವಮೊಗ್ಗ
ತೀರ್ಥಹಳ್ಳಿಯ ಡಾ.ಅರುಣ್ ಹೊಸಕೊಪ್ಪ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು ಅವರ ಸ್ಪರ್ಧೆಯಾಕೆ? ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೆ ಸ್ಪರ್ಧಿಸಬೇಕು ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.
2012 ಮತ್ತು 2018 ರಲ್ಲಿ ಸ್ಪರ್ಧಿಸಿ ಸೋತಿದ್ದೆ. ಆದರೆ ಕ್ಷೇತ್ರದ ಮತದಾರರೊಂದಿಗೆ ಸಂಪರ್ಕವನ್ನ ನಿರಂತರ ಇಟ್ಟುಕೊಂಡು ಸ್ಪರ್ಧಿಸುತ್ತಿರುವೆ. 6 ಜಿಲ್ಲೆಯ 35 ವಿಧಾನ ಸಭೆ ಕ್ಷೇತ್ರ ಹೊಂದಿರುತ್ತದೆ. ಎರಡು ತಿಂಗಳಿಂದ ಮತ್ತು ರಜೆ ಕಾರಣ ಶಿಕ್ಷಕರು ಸಿಗ್ತಾ ಇಲಗಲದ ಕಾರಣ ಮೊಬೈಲ್ ಸಂಪರ್ಕ ಸಾಧಿಸಿರುವೆ. ಎರಡು ಬಾರಿ ಸ್ಪರ್ಧಿಸಿ ಸೋತಿರುವೆ. ಶಿಕ್ಷಕರ ಸಮಸ್ಯೆಯನ್ನ ಬಗೆಹರಿಸಲು ವಿಶಿಷ್ಟವಾಗಿ ಸ್ಪಂಧಿಸಿ ಬಗೆಹರಿಸುವ ಬಗ್ಗೆ ವಿಶ್ವಾಸ ಹೊಂದಿದ್ದೇನೆ ಎಂದರು.
ನಾನು ಒಬ್ಬನೆ 35 ವಿಧಾನ ಸಭೆ ಕ್ಷೇತ್ರಕ್ಕೆ ನೇರವಾಗಿ ಪ್ರಚಾರಕ್ಕೆ ಇಳಿಯಬೇಕಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು ಈ ಬಾರಿ ಒಂದು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು.
ಶಿಕ್ಷಕರ ಕ್ಷೇತ್ರಕ್ಕೆ ಒಬ್ಬ ಶಿಕ್ಷಕ ಸ್ಪರ್ಧಿಸಿ ಆಯ್ಕೆಯಾಗಬೇಕು. ಶಿಕ್ಷಕರಲ್ಲದವರಿಗೆ ಮತ ಹಾಕುವ ಸ್ಥಿತಿಯಲ್ಲಿ ಶಿಕ್ಷಕರು ಇರುವುದರಿಂದ ಹಾಲಿ ಎಂಎಲ್ ಸಿ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. ನಾನು ನಿಮಗೆ ಇಷ್ಟವಿಲ್ಲವೆಂದರೆ ಇತರೆ ಶಿಕ್ಷಕರನ್ನ ಆಯ್ಕೆ ಮಾಡುವಂತೆ ಅರುಣ್ ಆಗ್ರಹಿಸಿದ ಅರುಣ್ ನಾಳೆ ನಾಮಪತ್ರ ಸಲ್ಲಿಸುತ್ತಿರುವೆ ಎಂದರು.
ನೋಂದಣಿ 10 ಸಾವಿರ ಆಗಿತ್ತು. 2018 ರಲ್ಲಿ 18 ಸಾವಿರ ನೋಂದಣಿ ಆಗಿ 12 ಸಾವಿರ ಮತ ಗಳಿಸಿದ್ದೆ. ಈ ಬಾರಿ ಶಿಕ್ಷಕರನ್ನ ನಿರಂತರ ಸಂಪರ್ಕ ಹೊಂದಿರುವುದರಿಂದ ಗೆಲುವು ನಮ್ಮದೆ ಎಂದ ಅವರು ಶಿಕ್ಷಕರ ಕ್ಷೇತ್ರದಲ್ಲಿ 20 ಸಾವಿರ ಆಗಿದೆ. ಶಿಕ್ಷಕರ ಶಿಕ್ಷಕರೇ ಸ್ಪರ್ಧಿಸಬೇಕೆಂಬ ಕಾನೂನು ತರಬೇಕಿತ್ತು, ಬಂದಿಲ್ಲ ಎಂದರು.
ಇವತ್ತಿನ ವರೆಗೆ ಶಿಕ್ಷಕರ ಕ್ಷೇತ್ರದಿಂದ ಶಿವಮೊಗ್ಗದಿಂದ ಯಾರೂ ಆಯ್ಕೆಯಾಗಿಲ್ಲ. ನಮ್ಮ ಜಿಲ್ಲೆಗೆ ಒಂದು ಅವಕಾಶಕೊಡುವಂತೆ ಕೋರಿದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಅಪಸ್ವರವಿದೆ. ಮೈತ್ರಿ ಮೇಲ್ಮಟ್ಟದ ನಾಯಕರಲ್ಲಿ ಇದೆ. ಆದರೆ ಕೆಳಹಂತದಲ್ಲಿ ಇಲ್ಲ.ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿಲ್ಲ. ಶಿಕ್ಷಕರು ರಾಜಕೀಯದಲ್ಲಿ ತೊಡಗಿಸುಕೊಳ್ಳುವುದಿಲ್ಲ. ಹಾಗಾಗಿ ರಾಜಕೀಯೇತರವಾಗಿ ಶಿಕ್ಷಕರು ಸ್ಪರ್ಧಿಸುವುದರಿಂದ ಶಿಕ್ಷಕರ ಕ್ಷೇತ್ರದ ಓರ್ವರಿಗೆ ಅವಕಾಶಕೊಡುವಂತೆ ಕೋರಿದರು.
ಸರ್ಕಾರಿ ಶಾಲೆ ಶಿಕ್ಷಕರಿಗೆ ಸವಲತ್ತು ಕೊಡುವುದು. ಒಪಿಎಸ್ ಜಾರಿಯಾಗಬೇಕು. ಸರ್ಕಾರಿ ಶಾಲೆ ಒಳಗಡೆನೆ ಕೆಲ ಸಣ್ಣಪುಟ್ಟ ಸಮಸ್ಯೆ ಇರುತ್ತದೆ. ಅನುದಾನಿತ ಶಾಲೆಗಳ ಕಥೆ ಕೇಳುವರೆ ಇಲ್ಲ. ಶಾಲೆಗಳಲ್ಲಿ ಶಿಕ್ಚಕರು ಮತ್ತು ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿದೆ. ಇದನ್ನ ರಾಜಕೀಯವಾಗಿ ಎದುರಿಸಲು ಸಾಧ್ಯವಿಲ್ಲ. ಎಂದು ವಿವರಿಸಿದರು.
ಇದನ್ನೂ ಓದಿ-https://suddilive.in/archives/14738