Girl in a jacket

ಬಸ್ ಗೆ ಆಕಸ್ಮಿಕ ಬೆಂಕಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಿಂದ ಮೈಸೂರಿಗೆ  ತೆರಳುತ್ತಿದ್ದ ಐರಾವತ ಬಸ್‌ವೊಂದರಲ್ಲಿ ನಿನ್ನೆ  ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬಸ್‌ ಬಹುತೇಕ ಸುಟ್ಟು ಹೋಗಿದ್ದು, ಅದೃಷ್ಟವಶಾತ್‌ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ

ನಿನ್ನೆ ತರೀಕೆರೆ ತಾಲೂಕು ಅಜ್ಜಂಪುರ ಕ್ರಾಸ್‌ ಬಳಿ ತಡರಾತ್ರಿ 1.30 ರ ಸಮಯಕ್ಕೆ ಈ ಘಟನೆ ಸಂಭವಿಸಿದೆ. KA 01 f 9077 ಕ್ರಮಸಂಖ್ಯೆಯ ಸ್ಲೀಪರ್ ಕೋಚ್ ಬಸ್‌ ಶಿವಮೊಗ್ಗದಿಂದ ಪ್ರಯಾಣಿಕರನ್ನ ಕರೆದುಕೊಂಡು ಮೈಸೂರಿಗೆ ತೆರಳುತ್ತಿತ್ತು. ಬಸ್‌ನಲ್ಲಿ ಡ್ರೈವರ್‌/ ಕಂಡಕ್ಟರ್‌ ಸೇರಿದಂತೆ ನಲವತ್ತು ಮಂದಿ ಪ್ರಯಾಣಿಸುತ್ತಿದ್ದರು

ಕ್ರಾಸ್ ಬಳಿಯಲ್ಲಿ ಬಸ್‌ನಲ್ಲಿ ಹೊಗೆ ಬರುತ್ತಿರುವುದನ್ನ ಗಮನಿಸಿದ ಡ್ರೈವರ್‌ ತಕ್ಷಣವೇ ವಾಹನವನ್ನು ಬದಿಗೆ ಹಾಕಿ ಪ್ರಯಾಣಿಕರಿಗೆ ಇಳಿಯುವಂತೆ ಸೂಚಿಸಿದ್ದಾರೆ. ಪ್ರಯಾಣಿಕರು ಸಹ ತಮ್ಮ ತಮ್ಮ ಲಗೇಜ್‌ನೊಂದಿಗೆ ಬಸ್‌ನಿಂದ ಇಳಿದಿದ್ದಾರೆ. ಇದರ ನಡುವೆ ಡ್ರೈವರ್‌ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರಾದರೂ ಬಸ್‌ ಹಿಂಬದಿಯ ಇಂಜಿನ್‌ಗೆ ಬೆಂಕಿ ತಗುಲುತ್ತಿದ್ದರಿಂದ ಅದರ ತೀವ್ರತೆ ಹೆಚ್ಚಿತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಗೆ ಫೋನ್‌ ಮಾಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಇನ್ನೂ ಘಟನೆಗೆ ಶಾರ್ಟ್‌ ಸರ್ಕಿಟ್‌ ಕಾರಣ ಎಂದು ಹೇಳಲಾಗಿದ್ದು, ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ-https://suddilive.in/archives/14743

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close