Girl in a jacket

ಎರಡು ಪ್ರತ್ಯೇಕ ಅಪಘಾತ ಇಬ್ಬರು ಸಾವು

ಸುದ್ದಿಲೈವ್/ಶಿವಮೊಗ್ಗ

ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಮಲವಗೊಪ್ಪದ ಬಿ ಸಿದ್ದೇಶ್ ಮತ್ತು ಮತ್ತೋರ್ವ ಮಂಜ ನಾಯ್ಕ್(45) ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಂಜನಾಯ್ಕ್ ಎಳನೀರು ಮಾರುವವರಿಗೆ ಎಳನೀರು ಹಂಚುವ ಕೆಲಸ ಮಾಡಿಕೊಂಡಿದ್ದನು. ಕಾಚಿನಕಟ್ಟೆಯಿಂದ ಶಿವಮೊಗ್ಗಕ್ಕೆ ಬಂದು ಎಳನೀರು ಹಾಕಿ ವಾಪಾಸ್ ಕಾಚಿನಕಟ್ಟೆಗೆ ತೆರಳುವಾಗ ಸೋಗಾನೆಯ 3 ನೇ ಮೈಲಿಗಲ್ಲಿನಲ್ಲಿ ಅಪಘಾತ ಸಂಭವಿಸಿದೆ.

ಬೈಕ್ ನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದ ಮಂಜನಾಯ್ಕ್ ನನ್ನ ಮಂಗಳೂರಿನ‌ ವೆನ್ ಲಾಕ್ ಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾನೆ. ಪ್ರಕರಣ ತುಂಗನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅದರಂತೆ ಸಿದ್ದೇಶ್ ಅಬ್ಬಲಗೆರೆ ಮುರುಡಯ್ಯನ ಕೆರೆಯ ಬಳಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದರು. ಅವರನ್ನ ಅಂಬ್ಯೂಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಕರೆದೊಯ್ಯಲಾಗಿತ್ತು. ಮೆಗ್ಗಾನ್ ವೈದ್ಯರು ಪರಿಶೀಲಿಸಿ ಸಿದ್ದಪ್ಪನ ಸಾವನ್ನ ದೃಢಪಡಿಸಿದ್ದಾರೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/14130

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು