Girl in a jacket

ಮಳೆಗೆ ಶತಾಬ್ದಿ ರೈಲಿನ ಪ್ರಯಾಣಿಕರು ಹೈರಾಣು

ಸುದ್ದಿಲೈವ್/ಶಿವಮೊಗ್ಗ

ಸುಡುವ ಬಿಸಿಲಿನಲ್ಲಿ ಮಳೆ ಬಂದರೆ ಯಾರಿಗೆ ಖುಷಿಯಾಗೊಲ್ಲ. ಅದು ರೈಲಿನಲ್ಲಿ ಸಂಚರಿಸುವಾಗ ಹೊರಗಡೆ ಮಳೆ ಬಿದ್ದರೆ ಗಾಜಿನ ಮೂಲಕ ಅದನ್ನ ನೋಡೋದೆ ಖುಷಿ.

ಆದರೆ ಇಂದು ಬೆಂಗಳೂರಿನಿಂದ   ಶಿವಮೊಗ್ಗಕ್ಕೆ ಹೊರಟ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರಿಗೆ ಮಳೆ ಜಿಗುಪ್ಸೆ ತಂದಿದೆ. ಶುಕ್ರವಾರ ಸಂಜೆ 5.15ಕ್ಕೆ ಬೆಂಗಳೂರಿನಿಂದ ಹೊರಟ ರೈಲಿನ ಡಿ 10 ಬೋಗಿಯ ಪ್ರಯಾಣಿಕರಿಗೆ ರೈಲಿನ ಒಳಗಡೆಯೇ ಮಳೆಯ ಅನುಭವವಾಯಿತು. ರೈಲಿನ ಕಿಟಕಿ, ಬಾಗಿಲು ಮೂಲಕ ಮಳೆ ನೀರು ಬರುತ್ತಿದ್ದನ್ನು ಹಾಗೂ ರೈಲಿನ ಛಾವಣಿಯಲ್ಲಿ ನೀರು ಸುರಿಯುತ್ತಿದ್ದನ್ನು ಕಂಡು ಪ್ರಯಾಣಿಕರು ಇಡೀ ಶಾಪ ಹಾಕಿದ್ದಾರೆ.

ಎರಡ್ಮೂರು ದಿನಗಳಿಂದ ಮಳೆಯಾಗುತ್ತಿದ್ದು ವಾತಾವರಣ ಹಿತವಾಗಿದೆ. ಆದರೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಪ್ರಯಾಣಿಕರಿಗೆ ಮಳೆ ಯಾಕಾದರೂ ಬರುತ್ತಿದೆಯೋ ಎಂದೆನಿಸಿತು ಎಂದು ಡಿಜಿಟಲ್ ಮಾಧ್ಯಮವೊಂದು ಸುದ್ದಿಮಾಡಿದೆ.

ಶತಾಬ್ದಿ ರೈಲಿನಲ್ಲಿ ಎಲ್ಲವೂ ಕಾಯ್ದರಿಸಿದ ಸೀಟುಗಳಾಗಿದ್ದ ಕಾರಣ ಬೇರೆ ಬೋಗಿಗೆ ಹೋಗಿ ಕೂರಲು ಸಹ ತೊಂದರೆಯಾಗಿತ್ತು. ರೈಲ್ವೆ ಇಲಾಖೆ ಕೂಡಲೇ ಈ ರೀತಿ ಇರುವುದನ್ನು ಸರಿಪಡಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ-https://suddilive.in/archives/14926

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು