ಸುದ್ದಿಲೈವ್/ಶಿವಮೊಗ್ಗ
ಇತ್ತೀಚೆಗೆ ಗೋಂಧಿ ಚಟ್ನಹಳ್ಳಿಯಲ್ಲಿ ಪಾನಿಪುರಿ ವ್ಯಾಪಾರ ನಡೆಸುತ್ತಿದ್ದ ರಂಗನಾಥ್ ಎಂಬುವರ ಪತ್ನಿ ಶೋಭಾರವರು ಸಾಲದ ಬಾಧೆಗೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾಲದ ಬಾಧೆಯ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಾದ ಬೆನ್ನಲ್ಲೇ ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಪ್ರಕರಣಕ್ಜೆ ಸಂಬಂಧಿಸಿದಂತೆ 217 ಚೆಕ್ ಗಳು, ಪ್ರಾಮಿಸರಿ ನೋಟ್, ನಿವೇಶನ ಮತ್ತು ವಾಹನ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೊಂದಿ ಚಟ್ನಳ್ಳಿಯ ರಂಗನಾಥ್ ಎಂಬುವರು, 2 ವರ್ಷಗಳ ಹಿಂದೆ ಮನೆ ಕಟ್ಟುವ ಸಲುವಾಗಿ ತಮ್ಮದೇ ಗ್ರಾಮದ ವಾಸಿಗಳಾದ ಅನಿಲ, ರಾಜಣ್ಣ, ಪ್ರಭಣ್ಣ, ವಿಜಯೇಂದ್ರಣ್ಣ, ಪ್ರದೀಪ ಮತ್ತು ಹಾಲೇಶಪ್ಪ ರವರಿಂದ ಪ್ರತಿ ತಿಂಗಳು 3% ಬಡ್ಡಿಗೆ ಸಾಲವನ್ನು ಪಡೆದುಕೊಂಡಿದ್ದು, ಸಾಲದ ಹಣ ಮತ್ತು ಬಡ್ಡಿಯನ್ನು ಸಕಾಲದಲ್ಲಿ ನೀಡಲು ಆಗದೇ ಇದ್ದುದರಿಂದ, ಸಾಲ ನೀಡಿದ ವ್ಯಕ್ತಿಗಳು ರಂಗನಾಥ್ ರವರ ಮನೆಯ ಹತ್ತಿರ ಬಂದು ಸಾಲದ ಹಣ ಮತ್ತು ಬಡ್ಡಿಯನ್ನು ನೀಡುವಂತೆ ಗಲಾಟೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿತ್ತು.
ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ, ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ, ಬಿ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಶ್ರೀ ಸತ್ಯನಾರಾಯಣ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವು ಗ್ರಾಮದ ವಾಸಿಗಳಾದ ಅನಿಲ, ರಾಜಣ್ಣ, ಪ್ರಭಣ್ಯ, ವಿಜಯೇಂದ್ರಣ್ಯ, ಪ್ರದೀಪ ಮತ್ತು ಹಾಲೇಶಪ್ಪ ಸೇರಿ ಒಟ್ಟು ಆರು ಜನ ಆರೋಪಿತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಒಟ್ಟು 217 ಸಹಿ ಇರುವ ಖಾಲಿ ಚೆಕ್ ಗಳು, ಪ್ರಾಮಿಸರಿ ನೋಟ್ ಗಳು, ನಿವೇಶನ ಮತ್ತು ವಾಹನ ದಾಖಲಾತಿಗಳನ್ನು ವಶಪಡಿಸಿಕೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿರುತ್ತದೆ.
ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆ/ 112 ಸಹಾಯಾವಾಣಿಗೆ ಮಾಹಿತಿ ಅಥವಾ ದೂರನ್ನು ನೀಡಲು ಕೋರಿದೆ.
ಇದನ್ನೂ ಓದಿ-https://suddilive.in/archives/14923