Girl in a jacket

ಚಿಕಿತ್ಸೆ ಫಲಕಾರಿಯಾಗದೆ ಯಾಸಿನ್ ಖುರೇಶಿ ಸಾವು

ಸುದ್ದಿಲೈವ್/ಶಿವಮೊಗ್ಗ

ಗ್ಯಾಂಗ್ ವಾರ್ ಪ್ರಕರಣದಲ್ಲಿ ಗಾಯಗೊಂಡಿದ್ದ ಯಾಸಿನ್ ಖುರೇಶಿ ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿದೆ. ಆತನ ಸಾವು ಹಲವು ಗೊಂದಲಕ್ಕೆ ಕಾರಣವಾಗಿತ್ತು.

ಇಂದು ಸಂಜೆ 6-15 ರಿಂದ 6-30 ಕ್ಕೆ ಆತನ ಸಾವು ಸಂಭವಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ನಡೆದಿದ್ದ ಗ್ಯಾಂಗ್ ವಾರ್ ನಲ್ಲಿ ಶೋಯೇಬ್ ಯಾನೆ ಸೆಬು ಮತ್ತು ಗೌಸ್ ಮೃತಪಟ್ಟಿದ್ದರು. ಆದರೆ ಗಾಯಗೊಂಡಿದ್ದ ಯಾಸಿನ್ ಖುರೇಶಿಯನ್ನ  ನಿನ್ನೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಇಂದು ಬೆಳಿಗ್ಗೆ ಸಾವಾಗಿತ್ತು ಎಂಬುದರ ಬಗ್ಗೆ ಹಲವು ರೂಮರ್ಸ್ ಹರಡಿತ್ತು. ಆದರೆ ಎಸ್ಪಿಯವರೆ ಯಾಸಿನ್ ಬದುಕಿರುವುದಾಗಿ ಸ್ಪಷ್ಟಪಡಿಸಿದ್ದರು.

ಸಂಜೆ 6-15 ರಿಂದ 6-30 ರ ಸಮಯದಲ್ಲಿ ಆತನ ಸಾವನ್ನ ಖುದ್ದು ಎಸ್ಪಿಯವರೆ ಸ್ಪಷ್ಟಪಡಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಖುರೇಶಿಯ ಸಾವಾಗಿದೆ. ಆತನಿಗೂ ಮತ್ತು ಆದಿಲ್ ಎಂಬಾತನ ನಡುವೆ ಗಲಾಟೆಯಾಗಿರುವುದಾಗಿ ತಿಳಿದು ಬಂದರೂ ಸಹ ಯಾವ ವಿಷಯಕ್ಕೆ ಗಲಾಟೆ ಎಂಬುದು ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

ಕೊಲೆ ಆರೋಪದ ಅಡಿ 10 ಜನ ಮತ್ತು ಕೊಲೆಗೆ ಯತ್ನದ ಪ್ರಕರಣದಲ್ಲಿ 8 ಜನರನ್ನ ಬಂಧಿಸಲಾಗಿದೆ.

ಇದನ್ನೂ ಓದಿ-https://suddilive.in/archives/14532

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು