Girl in a jacket

ಮೂರು ಅಂಶದ ಮೇಲೆ ನಂದಿನಿ ಹಾಲಿನ ವಾಹನದ ಮಾಲೀನಕನಿಗೆ ಬಿತ್ತು 25 ಸಾವಿರ ರೂ ದಂಡ

ಸುದ್ದಿಲೈವ್/ಶಿವಮೊಗ್ಗ

ಅಪ್ರಾಪ್ತರಿಗೆ ಚಾಲನೆ ನೀಡುವಂತಿಲ್ಲವೆಂಬ ಕಾನೂನು ಇದ್ದರೂ ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ದೊಡ್ಡಮೊತ್ತದ ಹಣವನ್ನೂ ದಂಡದ ರೂಪದಲ್ಲಿ ವಾಹನ ಮಾಲೀಕರು ನೀಡುತ್ತಿದ್ದಾರೆ.

ಜೂ.19 ರಂದು ತೀರ್ಥಹಳ್ಳಿ ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದ್ದ ವೇಳೆ ಅಪ್ರಾಪ್ತನಿಗೆ ದ್ವಿಚಕ್ರವಾಹನ ನೀಡಿ ಪೋಷಕರು ಪೇಚಿಗೆ ಸಿಲುಕಿದ್ದರು. ನ್ಯಾಯಾಲಯವೂ ಸಹ 25 ಸಾವಿರ ರೂ. ದಂಡ ವಿಧಿಸಿತ್ತು. ಅದೇರೀತಿ ಶಿವಮೊಗ್ಗದಲ್ಲೂ  ನಂದಿನಿ ವಾಹನವನ್ನ ಚಲಾಯಿಸುತ್ತಿದ್ದ  ಅಪ್ರಾಪ್ತನಿಗೆ  ನ್ಯಾಯಾಲಯದಿಂದ ದೊಡ್ಡಮಟ್ಟದ ದಂಡವನ್ನ ವಾಹನದ ಮಾಲೀಕನಿಗೆ ವಿಧಿಸಿದೆ.

ಈ ಅಪ್ರಾಪ್ತ ಸಮವಸ್ತ್ರವಿಲ್ಲದೆ, ದೋಷಪೂರಿತ ನಂಬರ್ ಪ್ಲೇಟ್ ಹಾಕಿಕೊಂಡು ಬಂದಿದ್ದರಿಂದ ಆತನಿಗೆ ದಂಡ ವಿಧಿಸಲಾಗಿದೆ.  ಜೂ.20 ರಂದು ಸಂಜೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರು  ಅಮೀರ್ ಅಹ್ಮದ್  ವೃತ್ತದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ನಂದಿನಿ ಹಾಲಿನ ವಾಹನದ ಚಾಲಕನು ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡಿಕೊಂಡು ಬಂದಿದ್ದಾನೆ.

ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ವಾಹನಕ್ಕೆ Defective Number plate ಅಳವಡಿಸಿರುವುದು ಮತ್ತು ವಾಹನ ಚಾಲನಾ ಪರವಾನಿಗೆ ಇಲ್ಲದ 17 ವರ್ಷದ ಅಪ್ರಾಪ್ತನಿಗೆ  ವಾಹನ ಚಲಾಯಿಸಲು ನೀಡಿರುವುದು ಕಂಡುಬಂದಿರುತ್ತದೆ.

ನಂದಿನಿ ಹಾಲಿನ ವಾಹನದ ಮಾಲೀಕನಾದ ಟಿಪ್ಪುನಗರದ ವಾಸಿ ಧನುಷ್, (35) ವಿರುದ್ಧ  ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗಿತ್ತು.  ಇಂದು ಘನ 4ನೇ ಎಸಿಜೆ ಮತ್ತು ಜೆಎಂಎಫ್.ಸಿ ನ್ಯಾಯಾಲಯ  ವಾಹನದ ಮಾಲೀಕನಾದ ಧನುಷ್ ಗೆ ರೂ 25,500/- ದಂಡ ವಿಧಿಸಿ‌ ಅದೇಶಿದೆ.

ಇದನ್ನೂ ಓದಿ-https://suddilive.in/archives/17519

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು