Girl in a jacket

ಭದ್ರಾವತಿ ಗಾಂಜಾ ಮಾರಾಟ-ಓರ್ವ ಬಂಧನ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಮಧ್ಯಾಹ್ನ ಭದ್ರಾವತಿಯ ಟೌನ್ ಅನ್ವರ್ ಕಾಲೋನಿ, ಮೋಮಿನ್ ಮೊಹಲ್ಲಾದ ಕೆಇಬಿ ಎದುರು ಸಾರ್ವಜನಿಕ ರಸ್ತೆಯಲ್ಲಿ ಕಾರ್ ಒಂದನ್ನು ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಭರ್ಜರಿ ಗಾಂಜಾ ಪತ್ತೆಯಾಗಿದೆ. ಈ ಸಂಬಙಧ ಓರ್ವನನ್ನ ಬಂಧಿಸಲಾಗಿದೆ.  ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಮತ್ತು  ಕಾರಿಯಪ್ಪ ಎ.ಜಿ,  ಜಿಲ್ಲೆರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ  ನಾಗರಾಜ್ ಹಾಗೂ  ಸಿಪಿಐ ಶ್ರೀಶೈಲ್ ಅವರ ಮೇಲ್ವಿಚಾರಣೆಯಲ್ಲಿ, ಹಳೆನಗರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹೆಚ್. ಅವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದರು.

ಸ್ಥಳಕ್ಕೆ ಹೋಗಿ ದಾಳಿ ನಡೆಸಿದ ವೇಳೆ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಾಬೀತ್ @ ಮಹಮ್ಮದ್ ಸಾಬೀತ್, 23 ವರ್ಷ, ಮೋಮಿನ್ ಮೊಹಲ್ಲಾ, ಭದ್ರಾವತಿ ಈತನನ್ನು ದಸ್ತಗಿರಿ ಮಾಡಿ, ಆರೋಪಿಯಿಂದ ಅಂದಾಜು ಮೌಲ್ಯ 28,000/- ರೂಗಳ 1 ಕೆಜಿ 135 ಗ್ರಾಂ ತೂಕದ ಒಣ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಗಾಂಜಾ ಮಾರಾಟ ಮಾಡಿಗಳಿಸಿದ ರೂ 6000/- ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 1,10,000/- ರೂ ಮೌಲ್ಯದ ಫೊರ್ಡ್ ಫಿಗೋ ಕಾರನ್ನು ಅಮಾನತ್ತು ಪಡಿಸಿಕೊಂಡು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ಬೂ ಓದಿ-https://suddilive.in/archives/17217

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು