ಸಂಚಾರಿ ನಿಯಮದ ಬಗ್ಗೆ ಸಿಪಿಐನಿಂದ ತಪಾಸಣೆ

ಸುದ್ದಿಲೈವ್/ಶಿವಮೊಗ್ಗ

ಟ್ರಾಫಿಕ್ ಸಿಪಿಐ ಅವರಿಂದ ವಾಹನಗಳ ತಪಾಸಣೆ ನಡೆದಿದೆ. ತಪಾಸಣೆ ವೇಳೆ ದಾಖಲಾತಿ, ವಾಹನ ಸಂಚಾರದ ಬಗ್ಗೆ ಅರಿವು ಮೂಡಿಸಲಾಗಿದೆ.

ಇಂದು ಬೆಳಗ್ಗೆ ಸಿಪಿಐ ಶ್ರೀಮತಿ ಲತಾ ಬಿ. ಕೆ. ಇವರು  ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿ, ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ ದಾಖಲಾತಿಗಳಾದ ಆರ್.ಸಿ (ನೋಂದಣಿ ಪ್ರಮಾಣ ಪತ್ರ), ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಿಮಾ ಪತ್ರ, ಡಿ.ಎಲ್ (ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ ದಾಖಲಾತಿಗಳನ್ನು ಮತ್ತು ವಾಹನದಲ್ಲಿ ಪ್ರಥಮಾ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

ನಂತರ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡದೇ ಕಡ್ಡಾಯವಾಗಿ ವೇಗದ ಮಿತಿಯಲ್ಲಿಯೇ ವಾಹನಗಳನ್ನು ಚಾಲನೆ ಮಾಡುವಂತೆ ಸೂಚಿಸಲಾಯಿತು,

ಚಾಲನೆಯ ವೇಳೆ ಮಧ್ಯಪಾನ ಮಾಡಿ ವಾಹನ ಮಾಡದಂತೆ, ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಬಳಕೆ ಮಾಡದಂತೆ ಮತ್ತು ಶಾಲಾ ವಾಹನದಲ್ಲಿ ಲಭ್ಯವಿರುವ ಆಸನಗಳಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೂರಿಸಿಕೊಂಡು ಹೋದಗಂತೆ ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ-https://suddilive.in/archives/17134

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close