ಸುದ್ದಿಲೈವ್/ಶಿವಮೊಗ್ಗ
ಗಾಂಜಾ ಮಾರಾಟ ಮಾಡಿದ ಆರೋಪದ ಅಡಿ ಮೂವರನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 790 ಗ್ರಾಂ ಒಣ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ.
ನಿನ್ನೆ ಬೆಳಗ್ಗೆ ಸಾಗರ ಟೌನ್ ಎಳ್ಳಾರೆ ಕ್ರಾಸ್ ನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ,
ಮತ್ತು ಕಾರಿಯಪ್ಪ ಎ.ಜಿ, ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಗೋಪಾಲ ಕೃಷ್ಣ ಟಿ ನಾಯಕ್, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ ಹಾಗೂ ಸಾಗರ ಟೌನ್ ಪೊಲೀಸ್ ಠಾಣೆಯ ಪಿಐ ಸೀತಾರಾಂ, ರವರ ಮೇಲ್ವಿಚಾರಣೆಯಲ್ಲಿ, ಪಿಎಸ್ಐ ನಾಗರಾಜ್, ಟಿ. ಎಂ, ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ,
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1) ರಾಘವೇಂದ್ರ, 42 ವರ್ಷ, ಕಟ್ಟಿನಕಾರು ಗ್ರಾಮ, ಸಾಗರ, 2) ರಮೇಶ, 20 ವರ್ಷ, ಹೊಸೂರು ಮರಾಠಿ ಗ್ರಾಮ, ಸಾಗರ ಮತ್ತು 3) ಪ್ರವೀಣ, 26 ವರ್ಷ, ಕದರೂರು ಗ್ರಾಮ, ಸಾಗರ ಇವರನ್ನು ದಸ್ತಗಿರಿ ಮಾಡಿ ಸದರಿ ಆರೋಪಿಗಳಿಂದ ಅಂದಾಜು ಮೌಲ್ಯ 23,000/- ರೂಗಳ 790 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ,
ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ *ಗುನ್ನೆ ಸಂಖ್ಯೆ 0144/2024 ಕಲಂ 20(a), 20(c)(ii)(a) NDPS* ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಇದನ್ನೂ ಓದಿ-https://suddilive.in/archives/17140
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ