ಸುದ್ದಿಲೈವ್/ಶಿವಮೊಗ್ಗ
ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್(69) ಗೆ ಹೃದಯಾಘಾತವಾಗಿದೆ. ಇಂದು ಬಿಜೆಪಿಯ ಪ್ರತಿಭಟನೆಯಲ್ಲಿ ಭಾಗಿಯಾದ ಭಾನುಪ್ರಕಾಶ್ ಗೆ ಮಾಸಿವ್ ಸ್ಟ್ರೋಕ್ ಹೊಡೆದಿದೆ. ಇದರಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ 11-15 ರ ವೇಳೆಯಲ್ಲಿ ಗೋಪಿ ವೃತ್ತದ ಬಳಿ ಬಿಜೆಪಿ ಪಕ್ಷದ ವತಿಯಿಂದ ಪೆಟ್ರೋಲ್ ಡೀಸೇಲ್ ದರ ಏರಿಕೆ ವಿರೋಧಿಸಿ ಇಂದು ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರು ಸರ್ಕಾರದ ವಿರುದ್ಧ ಪ್ರತಿಭಟನಾ ಭಾಷಣವನ್ನೂ ಮಾಡಿದ್ದರು.
ಬಹುತೇಕ ಪ್ರತಿಭಟನೆ ಮುಗಿದಿತ್ತು ರಘುಪತಿ ರಾಘವ ಹೇಳಿಕೊಡುತ್ತಿದ್ದ ವೇಳೆ ಸರ್ಕಾರದ ವಿರುದ್ಧ ಮೌನಾಚರಣೆಯನ್ನ ಮಾಡಿಸಿದ್ದರು. ನಂತರ ಸುಸ್ತಾಗುತ್ತಿದೆ ಎಂದು ವಾಹನಕ್ಕೆ ಹೋಗಿ ಕುಳಿತಿದ್ದರು. ತಕ್ಷಣವೇ ಮ್ಯಾಕ್ಸ್ ಗೆ ದಾಖಲಿಸಲಾಗಿದೆ. ವೈದ್ಯರು ಅವರ ಸಾವನ್ನ ಧೃಢಪಡಿಸಿದ್ದಾರೆ.
ಭಾನುಪ್ರಕಾಶ್ ಎಂಎಲ್ ಸಿ ಆಗಿದ್ದರು, ಬಿಜೆಪಿ ರಾಜ್ಯಾಧ್ಯಕ್ಷ, ಪ್ರಕೋಷ್ಠಗಳ ಸಂಚಾಲಕ, ಹಾಗೂ ಜಿಲ್ಲಾ ಬಿಜೆಪಿಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಮೃತ ದೇಹವನ್ನ ಮತ್ತೂರಿಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ-https://suddilive.in/archives/17067