ಸುದ್ದಿಲೈವ್/ತೀರ್ಥಹಳ್ಳಿ
ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ಪರಿಣಾಮ ತೀರ್ಥಹಳ್ಳಿ ನ್ಯಾಯಾಲಯ ಇಂದು ಪೋಷಕರಿಗೆ ದಂಡ ವಿಧಿಸಿ ಆದೇಶಿಸಿದೆ.
ಮೊನ್ನೆ ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಶಿವನಗೌಡ, ಅವರು ಪಟ್ಟಣದ ದೊಡ್ಮನೆ ಕೇರಿಯ ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬನು ವಾಹನ ಚಾಲನಾ ಪರವಾನಿಗೆ ಇಲ್ಲದೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬರುವಾಗ ತಡೆದು ತಪಾಸಣೆ ನಡೆಸಿದ್ದಾರೆ.
ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಬಾಲಕನ ತಂದೆ ಮೊಹಮ್ಮದ್ ಹಯಾನ್(42), ಈತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿದ್ದರು.
ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು. ಇಂದು ತೀರ್ಥಹಳ್ಳಿಯ ಘನ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಥಹಳ್ಳಿಯ ಮಾನ್ಯ ನ್ಯಾಯಾಧೀಶರು ದ್ವಿಚಕ್ರ ವಾಹನದ ಮಾಲೀಕರಾದ ಬಾಲಕನ ತಂದೆ ಮೊಹಮ್ಮದ್ ಹಯಾನ್ ಗೆ ರೂ 25,000/- ದಂಡ ವಿಧಿಸಿ ತೀರ್ಪು ನೀಡಿಆದೇಶಿಸಿದ್ದಾರೆ.
ಇದನ್ನೂ ಓದಿ-https://suddilive.in/archives/17454