Girl in a jacket

ಅಪ್ರಾಪ್ತಳಿಗೆ ಲೈಂಗಿಕ ದೌರ್ಜನ್ಯ ನೀಡಿದವನಿಗೆ ಎರಡು ವರೆ ಲಕ್ಷ ದಂಡ, ಶಿಕ್ಷೆ ಪ್ರಕಟ

ಸುದ್ದಿಲೈವ್/ಶಿವಮೊಗ್ಗ

ಅಪ್ರಾಪ್ತಳಿಗೆ ಖಾಸಗಿ ಚಿತ್ರಗಳನ್ನ ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದು ಲೈಂಗಿಕ ದೌರ್ಜನ್ಯವೆಸಗಿದ್ದ 30 ವರ್ಷದ ವ್ಯಕ್ತಿಗೆ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-2 ಐದು ವರ್ಷ ಕಠಿಣ ಕಾರಗೃಹ ವಾಸ ಹಾಗೂ 2,50,000 ರೂ. ದಂಡ ವಿಧಿಸಿ ತೀರ್ಫು ನೀಡಿದೆ.

2021ನೇ ಸಾಲಿನಲ್ಲಿ ಶಿವಮೊಗ್ಗ ಟೌನ್ ನ ವಾಸಿ 30 ವರ್ಷದ ಯುವಕನು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಖಾಸಗೀ ಚಿತ್ರಗಳನ್ನು ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಂಡು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಮಾನ ಹಾನಿ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆಂದು ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 354 (A), 354 (D), 376 (2) (n), 509 ಐಪಿಸಿ ಮತ್ತು ಪೋಕ್ಸೋ ಹಾಗೂ ಐಟಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಹಿಳಾ ಠಾಣೆಯ ಪಿಐ ವೀರೇಶ್ ಆರ್,  ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಶ್ರೀಧರ್ ಹೆಚ್ ಆರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-2 , ಆರೋಪಿತನ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಮೋಹನ್ ಜೆ ಎಸ್ ರವರು ಜೂ.26 ರಂದು ಪ್ರಕರಣದ ಆರೋಪಿ ಶಿವಮೊಗ್ಗ ಟೌನ್ ನ ವಾಸಿ 30 ವರ್ಷದ ಯುವಕನಿಗೆ 5 ವರ್ಷ ಕಠಿಣ ಕಾರಾವಾಸ ಶಿಕ್ಷೆ, ರೂ 2,50,000/- ದಂಡ ವಿಧಿಸಿ ತೀರ್ಪು ನೀಡಿದೆ.

ದಂಡ ಕಟ್ಟಲು ವಿಫಲನಾದಲ್ಲಿ 1 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ನೊಂದ ಬಾಲಕಿಗೆ ಪರಿಹಾರವಾಗಿ ದಂಡದ ಮೊತ್ತದಲ್ಲಿ 2,40,000/- ನೀಡುವಂತೆ ಆದೇಶಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/17949

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು