ಸುದ್ದಿಲೈವ್/ಶಿವಮೊಗ್ಗ
ದಾಖಲಾತಿಗಳಿಲ್ಲದೆ ಭದ್ರಾವತಿಗೆ ಬಂದು ನೆಲೆಸಿದ್ದ ಬಾಂಗ್ಲಾ ಯುವಕ ಪ್ರಕರಣ ನ್ಯಾಯಾಲಯ ದಲ್ಲಿರುವಾಗಲೇ ತಲೆಮರೆಸಿಕೊಂಡು ನ್ಯಾಯಾಂಗದ ಕಲಾಪಕ್ಕೆ ಹಾಜರಾಗದೆವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಭದ್ರಾವತಿ ರೈಲ್ವೆ ಸ್ಟೇಷನ್ ಮಾರ್ಕೇಟ್ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಬಾಂಗ್ಲಾ ದೇಶದ ಮುನಶಿಗಂಜ್ ಜಿಲ್ಲೆಯ ಶ್ರೀದಾಂಪುರ ಗ್ರಾಮದ ನಿವಾಸಿ ಮಹಮ್ಮದ್ ರುಮನ್ ಹುಸೇನ್ ಬಿನ್ ಮಹಮ್ಮದ್ ಸಿರಾಜುಲ್ಲಾ ಇಸ್ಲಾಂ,( 25) ನವನಾಗಿದ್ದನು.
ಯುವಕನಿಗೆ ಭಾರತದೇಶಕ್ಕೆ ಬರಲು ಪಾಸ್‍ಪೋರ್ಟ, ವೀಸಾ ಅಥವಾ ಅಧಿಕೃತ ದಾಖಲೆಗಳು ಇಲ್ಲವೆಂದು ಹಿಂದಿ ಭಾಷೆಯಲ್ಲಿ ತಿಳಿಸಿದ್ದನು, ಈ ಆರೋಪಿತನು ಯಾವುದೇ ದಾಖಲಾತಿಗಳು ಇಲ್ಲದೇ ಬಾಂಗ್ಲಾದೇಶದಿಂದ ಭಾರತ ದೇಶಕ್ಕೆ ಬಂದಿದ್ದರಿಂದ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣ ವಿಚಾರಣೆಯಲ್ಲಿರುತ್ತದೆ. ಆರೋಪಿಯು ನ್ಯಾಯಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ.
ನ್ಯಾಯಲಯವು ಈ ಆರೋಪಿತನ ಪತ್ತೆ ಮತ್ತು ಸ್ಥಿರಾಸ್ಥಿಯ ಮಾಹಿತಿ ಬಗ್ಗೆ ಪ್ರಕ್ಲೋಮೇಶನ್ ಹೊರಡಿಸಿದ್ದು, ಈ ವ್ಯಕ್ತಿಯು ಎಲ್ಲಿಯಾದರೂ ಕಂಡುಬಂದಲ್ಲಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ-https://suddilive.in/archives/17676