Girl in a jacket

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಸುದ್ದಿಲೈವ್/ಶಿವಮೊಗ್ಗ

ಗ್ರಾಮ ಪಂಚಾಯಿತಿ ಚುನವಣೆಯಲ್ಲಿ ಸಹಾಯ ಮಾಡಿಲ್ಲ ಎಂಬ ಕಾರಣಕ್ಕೆ ಅಭ್ಯರ್ಥಿಯ ಪತಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಆರೋಪದ ಮೇರೆಗೆ ನ್ಯಾಯಾಲಯ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ 23,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಮಹೇಶ್ ನಾಯ್ಕ, ಎಂಬ 40 ವರ್ಷದ ವ್ಯಕ್ತಿಯು ಹೊಳೆಬೆನವಳ್ಳಿ ದೊಡ್ಡ ತಾಂಡಾ ಗ್ರಾಮ ನಿವಾಸಿಯಾಗಿದ್ದು 2014 ರಲ್ಲಿ ನಡೆದ ಪಂಚಾಯತಿ ಚುನಾವಣೆಗೆ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ದ್ವೇಶ ಬೆಳೆಸಿಕೊಂಡು ಕುಮಾರ ನಾಯ್ಕ್ ಹಾಗೂ ಇತರೆ 6 ಜನ ಸೇರಿಕೊಂಡು ಚಾನೆಲ್ ಏರಿಯಾದ ಮೇಲೆ ನಡೆದುಕೊಂಡು ಹೋಗುವಾಗ ಅಡ್ಡಗಟ್ಟಿ ಕೊಲೆ ಮಾಡಿದ್ದರು.

2017 ರಲ್ಲಿ ನಡೆದ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಸಿಪಿಐ ಲೋಕೇಶ್  ಪ್ರಕರಣದ ತನಿಖೆ ಕೈಗೊಂಡು, ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರದ ಅಭಿಯೋಜಕರಾಗಿ ಶ್ರೀಮತಿ ಪುಷ್ಪಾವತಿ, ವಾದ ಮಂಡಿಸಿದ್ದರು,  ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪಲ್ಲವಿ ಬಿ.ಆರ್ ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಈ ರೀತಿ ತೀರ್ಪು ನೀಡಿ ಆದೇಶಿಸಿದ್ದಾರೆ,

ಆರೋಪಿ ಕುಮಾರ ನಾಯ್ಕ, ಈತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ 23,500/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 3 ವರ್ಷ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/16927

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು