ಸುದ್ದಿಲೈವ್/ಸಾಗರ
ಸಾಗರದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದಲ್ಲಿದ್ದ ಹೊರಗುತ್ತಿಗೆ ನೌಕರನೋರ್ವ ಡೇಂಗ್ಯೂ ಕಾಯಿಲೆಯಿಂದ ಸಾವನ್ನಪ್ಪಿರುವುದು ವರದಿಯಾಗಿದೆ.
ಸಾಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗರಾಜು ಎಂಬ 34 ವರ್ಷದ ಹೊರಗುತ್ತಿಗೆದಾರ ಜೂ.10 ರಂದು ಕೆಲಸ ಮಾಡುವ ವೇಳೆ ಸುಸ್ತು ಎಂದು ಅಲ್ಲೇ ಸಾರ್ವಜನಿಕ ತುರ್ತು ವಿಭಾಗದಲ್ಲಿ ದಾಖಲಾಗಿದ್ದರು.
ಅತಿ ಹೆಚ್ಚು ಶುಗರ್ ನಿಂದ ಬಳಲುತ್ತಿದ್ದರು. ನಾಗರಾಜ್ ಹೊಟ್ಟನೋವು ಎಂದು ಹೇಳಿದ್ದರು. ಅವರನ್ನ ಶಿವಮೊಗ್ಗ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಡೆಂಗ್ಯೂ ಜ್ವರ ಎಂದು ಪತ್ತೆಯಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿದೆ.
ಇದನ್ನು ಓದಿ-https://suddilive.in/archives/16812
Tags:
ಕ್ರೈಂ ನ್ಯೂಸ್