ಸುದ್ದಿಲೈವ್/ಶಿವಮೊಗ್ಗ
ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಆರೋಪಿಗಳನ್ನ ಮೈಸೂರಿನಲ್ಲಿ ಬಂಧಿಸಿದ್ದಾರೆ.
ರೌಡಿ ಶೀಟರ್ ಕತ್ತೆ ಕಾರ್ತಿಕ್ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳು.ಮೈಸೂರಿನಲ್ಲಿ ತಲೆ ಕರೆಸಿಕೊಂಡಿದ್ದ ಐವರು ದುಷ್ಕರ್ಮಿಗಳನ್ನ ಬಂಧಿಸಲಾಗಿದೆ. ಶಿವಮೊಗ್ಗ ಕೋಟೆ ಪೊಲೀಸರಿಂದ ಕಾರ್ಯಚರಣೆ ನಡೆದಿದೆ.
ಕೋಟೆ ಪೊಲೀಸ್ ಠಾಣೆಯ ಪಿ ಎಸ್ ಐ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ. ಶಿವಮೊಗ್ಗದ ವಿದ್ಯಾನಗರ ಬಳಿ ಭಾನುವಾರ ಜೂ.23 ರಂದು ಮಾರಕಾಸ್ತ್ರಗಳಿಂದ ಹಲ್ಲೆ ಘಟನೆ ನಡೆದಿತ್ತು ಜೆರಾಲ್ಡ್, ಜೈಶಾನ್ ದರ್ಶನ್ ಮತ್ತು ಇತರೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಲಾಂಗು ಮಚ್ಚಿಗಳಿಂದ ಹಲ್ಲೆ ಮಾಡಿರುವ ದುಷ್ಕರ್ಮಿಗಳಿಂದ ಗಂಭೀರವಾಗಿ ಗಾಯಗೊಂಡಿರುವ ಕತ್ತೆ ಕಾರ್ತಿಕ್ ನನ್ನ ಮಣಿಪಾಲ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು.
ಶಿವಮೊಗ್ಗ ನಗರದ ಹೊಸಮನೆ ನಿವಾಸಿ ಕತ್ತೆ ಕಾರ್ತಿಕ್ ಗೆ ಕರೆ ಮಾಡಿಸಿಕೊಂಡು ಸಹ್ಯಾದ್ರಿ ಕಾಲೇಜಿನ ಎದುರು ಹಲ್ಲೆ ನಡೆದಿತ್ತು. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಜಯ್ ಸನ್ (20), ಸೋನು ವಿ (21) ನರಸಿಂಹ (39) ಮತ್ತೋರ್ವನನ್ನ ಬಂಧಿಸಲಾಗಿದೆ.
ಇದನ್ನೂ ಓದಿ-https://suddilive.in/archives/17879
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ