ಸುದ್ದಿಲೈವ್/ಶಿವಮೊಗ್ಗ
ಗಾಂಧಿ ಬಜಾರ್ ನಲ್ಲಿ ಫೆವಿಕ್ವಿಕ್ ನ್ನ ನಕಲಿ ಪ್ರಾಡಕ್ಟ್ ಮಾರಾಟ ಮಾಡುತ್ತಿರುವ ಕುರಿತು ಸೆಮಿತಾ ಲೀಗಲ್ ನಲ್ಲಿ ಎಕ್ಸಿಕ್ಯೂಟಿವ್ ಆಫೀಸರ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.
ಶಿವಮೊಗ್ಗ ನಗರದ ಗಾಂಧಿ ಬಜಾರ ಕಸ್ತುರಬಾ ರಸ್ತೆಯಲ್ಲಿರುವ ರಾಕೇಶ್ ಟ್ರೇಡಿಂಗ ಕಂಪನಿ ಜನರಲ್ ಮರ್ಚಂಟ್ಸ್ ಮತ್ತು ಗಾಂಧಿ ಬಜಾರಿನಲ್ಲಿರು ಎಂಕೆ ಪ್ರಾವಿಜನ್ ಸ್ಟೋರ್ ನಲ್ಲಿ, ಎಂ,ಕೆ ಪ್ರಾವಿಜನ್ ಸ್ಟೋರ್ ನಲ್ಲಿ ನಕಲಿ ಫೆವಿಕ್ವಿಕ್ ಪ್ರಾಡಕ್ಟ್ ಪತ್ತೆಯಾಗಿದ್ದು, ಸಂಸ್ಥೆಯ ಸೆಮಿತಾ ಲಿಗಲ್ ಅಡ್ವಕೇಟ್ಸ್ & ಸೊಲಿಸಿಯಟರ್ ಕಂಪನಿಯ ಜಿ ರವಿ ದೂರು ದಾಖಲಿಸಿದ್ದಾರೆ.
ಕಂಪನಿಯ ಪರವಾಗಿ ರವಿಯವರಿಗೆ ಪವರ್ ಆಫ್ ಅಟರ್ನಿ ದೊರೆತಿದ್ದು, ಎರಡು ಅಂಗಡಿಗಳಿಗೆ ಭೇಟಿ ನೀಡಿ ವಸ್ತುಗಳನ್ನ ಖರೀದಿಸುವಾಗ ಫೆವಿಕ್ವಿಕ್ ಕೇಳಿದಾಗ ಅಂಗಡಿಯವ ನಕಲಿ ಫೆವಿಕ್ಬಿಕ್ ನೀಡಿದ್ದಾರೆ.
ಕಾನೂನು ಬಾಹೀರವಾಗಿ ವ್ಯವಹಾರದಲ್ಲಿ ತೊಡಗಿರುವವರೆಲ್ಲರ ಎರಡು ಅಂಗಡಿಯ ಮೇಲೆ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/16980