Girl in a jacket

ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಅರೆಸ್ಟ್-ಜೆಸಿ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಜಿಲ್ಲಾ ಯುವಮೋರ್ಚ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆಯನ್ನ ಮಹಿಳಾ‌ಪೊಲೀಸರು ಇಂದು ಬೆಳಗ್ಗಿನ ಜಾವ ಬಂಧಿಸಿದ್ದಾರೆ. ಮಹಿಳೆಗೆ ವಂಚಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಬಿಜೆಪಿ ಜಿಲ್ಲಾಘಟಕದಲ್ಲಿ ಅರುಣ್ ಕುಗ್ವೆ ಉತ್ತಮ ಸ್ಥಾನ ಪಡೆದಿದ್ದರು. ಈಗ ಹಿಂದೆ ಸಾಗರದ‌ ಮಹಿಳೆಗೆ ವಂಚಿಸಿದ ಪ್ರಕರಣದಲ್ಲಿ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಕಾರಣಾಂತರದಿಂದ ದೂರು ದಾಖಲಾಗಿರಲಿಲ್ಲ.

ಆದರೆ ಮಹಿಳೆಯು ಶಿವಮೊಗ್ಗ ಮಹಿಳಾ ಠಾಣೆಗೆ ಬಂದು ದೂರು ನೀಡಿದ್ದರಿಂದ ಮಹಿಳಾ ಠಾಣೆ ಪೊಲೀಸ್‌ ಇನ್ಪೆಕ್ಟರ್ ಭರತ್ ಕುಮಾರ್ ಇಂದು ಸಾಗರದಲ್ಲಿರುವ ಮನೆಗೆ ತೆರಳಿ ಅರುಣ್ ರನ್ನ‌ಬಂಧಿಸಿದ್ದಾರೆ. ಮದುವೆಯಾಗುವುದಾಹಿ ನಂಬಿಸಿ ಮಹಿಳೆಯನ್ನ ವಂಚಿಸಿದ ಪ್ರಕರಣದಲ್ಲಿ ಅರುಣ್ ಬಂಧನವಾಗಿದೆ.

ನಸುಕಿನ ಜಾವದಲ್ಲಿ ಅರುಣ್ ಕುಗ್ವೆಯನ್ನ‌ ಬಂಧಿಸಲಾಗಿದೆ. ಈ ಹಿಂದೆ ಈ ಮಹಿಳೆಯೊಂದಿಗಿನ ಜೊತೆ ತೀಸ್ರಾ ಉಂಟಾದಾಗ ಇನ್ನೇನು ಸೆಟ್ಲು ಮೆಂಟ್ ಆಯಿತು ಎನ್ನಲಾಗಿತ್ತು. ಆದರೆ ಈಗ ಮತ್ತೆ ಪ್ರಕರಣ ತೀವ್ರತೆ ಪಡೆದುಕೊಂಡು ಅರುಣ್ ಕುಗ್ವೆಗೆ ಬಂಧನವಾಗಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಸಾಗರ ಘಟಕದ ಯುವಮುಖಂಡರಾದ ವಿನೋದ್ ಜೊತೆ ಐವರ ಗಡಿಪಾರು ಮಾಡಬೇಕೆಂದು ಇಲಾಖೆ ತಯಾರಿ ನಡೆಸಿತ್ತು. ಐವರಲ್ಲಿ ಅರುಣ್ ಕುಗ್ವೆನೂ ಒಬ್ಬರಾಗಿದ್ದರು. ಇವರು ಮಾಜಿ ಶಾಸಕ ಹರತಾಳು ಹಾಲಪ್ಪನವರಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಈ ತಿಂಗಳಲ್ಲೇ ಅರುಣ್ ಗೆ ಬೇರೆ ಯುವತಿಯೊಂದಿಗೆ ಮದುವೆ ನಡೆಯಲಿತ್ತು. ಅಷ್ಟರಲ್ಲಿ ಅವರ ಬಂಧನವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು