ಶನಿವಾರ, ಜುಲೈ 6, 2024

ಜು. 08 ರಂದು ವಿದ್ಯುತ್ ವ್ಯತ್ಯಯ-ಸಹಕರಿಸಲು ಮನವಿ

ಸುದ್ದಿಲೈವ್/ಶಿವಮೊಗ್ಗ

ತಾವರೆಚಟ್ನಹಳ್ಳಿ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಎಫ್-3 ಅಬ್ಬಲಗೆರೆ ಐಪಿ ಮಾರ್ಗ ಮತ್ತು ಎಫ್-7 ಎನ್‍ಜೆವೈ ಮಾರ್ಗಗಳಲ್ಲಿ ವಾಹಕ ಬದಲಾವಣೆ ಮತ್ತು ಜಂಗಲ್ ಕಟ್ಟಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ  6-7 ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

ಈ ವ್ಯಾಪ್ತಿಯ ರತ್ನಗಿರಿನಗರ, ಅಬ್ಬಲಗೆರೆ, ಹುಣಸೋಡು, ತಲ್ಲಗಂಗೂರು, ಮೋಜಪ್ಪನ ಹೊಸೂರು, ಸುತ್ತಮುತ್ತಲಿನ ಕ್ರಷರ್‍ಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಜು. 08 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನರಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ-https://suddilive.in/archives/18654

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ