ಶನಿವಾರ, ಜುಲೈ 6, 2024

ಹೊಸನಗರ ತಾಲೂಕಿನಲ್ಲಿ ದಾಖಲೆಯ ಮಳೆ-ಜೀವಕಳೆ ಪಡೆದುಕೊಂಡ ಜೋಗ

ಸುದ್ದಿಲೈವ್/ಶಿವಮೊಗ್ಗ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜೋಗ ಜಲಪಾತ ಮೈದುಂಬಿ ದುಮುಕುತ್ತಿದೆ. ಇದನ್ನ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದಾರೆ.

ಕಳೆದ ಒಂದು ವಾರದಿಂದ ಜೋಗದಲ್ಲಿ ಮಳೆ ನಿರಂತರವಾಗಿ ಯಡಬಿಡದೆ ಸುರಿಯುತ್ತಿದೆ. ಲಿಂಗನಮಕ್ಕಿಗೆ ಕಳೆದ ಒಂದು ವಾರದಿಂದ ಸತತ ಮಳೆಗೆ 14.5 ಅಡಿ ನೀರು ಸಂಗ್ರಹವಾಗಿದೆ. ಜು1 ರಂದು 1750 ಅಡಿ ನೀರು ಸಂಗ್ರಹವಾಗಿದ್ದರೆ ಜು.6 ರಂದು 1764.8 ಅಡಿ ನೀರು ಸಂಗ್ರಹವಾಗಿದೆ.

ಜೋಗದಲ್ಲಿ ಮಳೆಯ ಅಬ್ವರದಿಂದಾಗಿ ಜೋಗ ಜಲಪಾತದಲ್ಲಿ ಜೀವ ಕಳೆ ತುಂಬಿದೆ. ರಾಜಾ ರಾಣಿ ರೋರಲ್ ರಾಕೆಟ್ ಹೆಸರಿನಲ್ಲಿ ಧುಮ್ಮಿಕ್ಕುವ ಜಲಪಾತದಲ್ಲಿ ಪಕ್ಕದಲ್ಲಿಯೇ ಝರಿಯ ರೂಪದಲ್ಲಿ ನೀರು ಧುಮ್ಮಿಕ್ಕುತ್ತಿದೆ.

ಪ್ರವಾಸಿಗರ ದಂಡು ಇಂದು‌ಹರಿದು ಬಂದಿದೆ. ಜೋಗದಲ್ಲಿ ಜಲಪಾತ ಹೇಗೆ ಧುಮ್ಮಿಕ್ಕುತ್ತದೆಯೋ ಹಾಗೆ ಪ್ರವಾಸಿಗರು ಹರಿದು ಬರಲಿದ್ದಾರೆ.‌ ಬಕ್ರೀದ್ ಹಬ್ಬಕ್ಕೆ ಜನರ ಸಾಗರವೇ ಹರಿದು ಬಂದಿತ್ತು. ಅದಾದ ನಂತರ ಇಂದು ತಕ್ಕಮಟ್ಟಿಗೆ ಜನ‌ಭೇಟಿ ನೀಡಿ ಜೋಗದ ಸೌಂದರ್ಯವನ್ನ ಸೋರೆಗೊಂಡಿದ್ದಾರೆ.

3000 ಜನ ಪ್ರವಾಸಿಗರು ಸಂಜೆ 4 ಗಂಟೆಯ ಸುಮಾರಿಗೆ ಜೋಗದಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು.

ಆರ್ಭಟಿಸಿದ ಪುನರ್ವಸು

ಮಲೆನಾಡಿನಲ್ಲಿ ಅಬ್ಬರದಿಂದಲೇ ಪುನರ್ವಸು ಮಳೆ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ದಾಖಲೆಯ ಮಳೆ ಸುರಿದಿದೆ. ಮಲೆನಾಡಿನ ಅಣ್ಣನ ಮಳೆ ಎಂದು ದೊಡ್ಡಪುಶ್ಯ ಮಳೆಯನ್ನ ಕರೆಯಲ್ಪಡುತ್ತದೆ.

ಹೊಸನಗರ ತಾಲೂಕಿನಾಧ್ಯಂತ ಮಳೆ ಬಿರುಸಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಶರಾವತಿ ಜಲಾನಯನ ಪ್ರದೇಶದ ಇಕ್ಕೆಲಗಳ ಹಳ್ಳ ಕೊಳ್ಳ ಉಪನದಿಗಳು ತುಂಬಿ ತುಳುಕುತ್ತಿವೆ.

ಸಾವೇಹಕ್ಲು ಹೈಯಸ್ಟ್ ಮಳೆ

ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲೂಕಿನ ಸಾವೇ ಹಕ್ಕಲಿನಲ್ಲಿ 138 ಮಿಲಿಮೀಟರ್ ಮಳೆಯಾಗಿದೆ. ಚಕ್ರಾನಗರದಲ್ಲಿ 125 ಮಿಲಿ ಮಿಟರ್ ಮಳೆ, ಮಾಸ್ತಿ ಕಟ್ಟೆಯಲ್ಲಿ 116 ಮಿಲಿಮೀಟರ್, ಹುಲಿಕಲ್ಲಿನಲ್ಲಿ 115 ಮಿಲಿ ಮೀಟರ್, ಬಿದನೂರುನಲ್ಲಿ 104 ಮಿಲಿಮೀಟರ್, ಹೊಂಬುಜದಲ್ಲಿ 93.4 ಮಿಲಿಮಿಟರ್, ಮಾಣಿಯಲಿ 82 ಮಿಲಿ ಮೀಟರ್, ಹೊಸನಗರದಲ್ಲಿ 70 ಮಿಲಿಮೀಟರ್, ಕಾರ್ಗನ್ನಲ್ಲಿ 69.6 ಮಿಲಿ ಮೀಟರ್, ರಿಪ್ಪನ್ಪೇಟೆಯಲ್ಲಿ 28.2 ಮಿಲಿ ಮೀಟರ್, ಅರಸಾಳಿ ನಲ್ಲಿ 21.6 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/18649

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ