ಭಾನುವಾರ, ಜುಲೈ 7, 2024

ಮೊದಲು ಮನವಿ, ಆ.1 ರಿಂದ ಪ್ರತಿಭಟನೆ-ಸರ್ಕಾರಿ ನೌಕರರ ಸಂಘದ ತೀರ್ಮಾನ

ಸುದ್ದಿಲೈವ್/ಬೆಂಗಳೂರು

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸರ್ಕಾರಿ ನೌಕರರಿಗೆ 7 ನೇ ವೇತನ ವರದಿ ಯಥಾವತ್ತಾಗಿ ಜಾರಿಯಾಗುವಂತೆ ಒತ್ತಾಯಿಸಿ ಹಲವು ಕಾರ್ಯಕ್ರಮವನ್ನ ಹಮ್ಮಿಕೊಳ್ಳಲು ತೀರ್ಮನಿಸಲಾಗಿದೆ.

ಮೂರು ಬೇಡಿಕೆ ಈಡೇರಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎನ್ ಪಿಎಸ್ ರದ್ದುಮಾಡಿ ಒಪಿಎಸ್ ಜಾರಿಯಾಗಬೇಕು. ಸರ್ಕಾರಿ ನೌಕರರಿಗೆ ಮತ್ತು ಕುಟುಂಬಸ್ಥರಿಗೆ ಆರೋಗ್ಯ ವಿಮೆ ಜಾರಿಗೊಳಿಸಬೇಕು ಹಾಗೂ ಸರ್ಕಾರಿ ನೌಕರರಿಗೆ 7 ನೇ ವೇತನ ಜಾರಿಗೊಳಿಸಬೇಕೆಂದು ಆಗ್ರಹಿಸಿದಲಾಗಿದೆ.

ಮೂರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜು.8 ರಿಂದ 14 ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಡಿಸಿ ಮತ್ತು ತಹಶೀಲ್ದಾರ್ ಅವರಿಗೆ  ನೌಕರರಿಗೆ 7 ನೇ ವೇತನ ಜಾರಿಗೊಳಿಸುವಂತೆ ಮನವಿ ನೀಡಲಾಗುವುದು.  ಈ ಹಿಂದಿನ ರಾಜ್ಯ ಸರ್ಕಾರಕ್ಕೆ 7 ನೇ ವೇತನ ಜಾರಿ ಮಾಡಲು ಸಂಘ ಒತ್ತಾಯಿಸಿದಾಗ ವರದಿ ತಯಾರಿಸಲು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗದ ಸಮಿತಿ ರಚಿಸಿತ್ತು.

ಇದಾಗಿ  ಹೊಸ ಸರ್ಕಾರ ಬಂದಾಗಿದೆ. ವರದಿ ಸಹ ಕೈ ಸೇರಿ ವರ್ಷಗಳು ಕಳೆದಿವೆ. ವರ್ಷ ಕಳೆದರೂ ವರದಿ ಪ್ರಕಾರ ಜಾರಿ ಮಾಡಬೇಕೆಂಬುದು ಸಭೆಯ ತೀರ್ಮಾನವಾಗಿದೆ. ತಪ್ಪಿದ್ದಲ್ಲಿ ಆ.1 ರಿಂದ ಕೆಲಸಕ್ಕೆ ಗೈರು ಹಾಜರಿಯಾಗಿ ಪ್ರತಿಭಟನೆಗೆ ಸಭೆ ತೀರ್ಮಾನಿಸಿದೆ.

ಒಂದು ವೇಳೆ ಪ್ರತಿಭಟನೆ ನಡೆದರೆ, ಸರ್ಕಾರಕ್ಕೆ ಇರುವ ಆಯ್ಕೆಗಳೇನು?

ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರದ ನಡುವೆ ಬಹುತೇಕ ಹೊಂದಾಣಿಕೆ ಇರುತ್ತದೆ. ಪ್ರತಿಭಟನೆ ನಡೆಯುವುದು ಬಹಳ ಕಡಿಮೆನೆ.  ಹಾಗಂತ ಸರ್ಕಾರ ಮತ್ತು ಸರ್ಕಾರಿ ನೌಕರರ ನಡುವೆ ತೀಸ್ರಾ ಇರಲಿಲ್ಲವಾ ಎಂದು ಪ್ರಶ್ನಿಸಿದರೆ, ನಡೆದಿದೆ ಎಂದು ಹೇಳಲೇ ಬೇಕು.

ಈ ಹಿಂದಿನ ಸರ್ಕಾರ ಇದ್ದಾಗ ಸರ್ಕಾರಿ ನೌಕರರು ಹಲವು ಕಾರಣಕ್ಕೆ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರಿ ನೌಕರರ ಪ್ರತಿಭಟನೆ ಬಹಳ ಅಪರೂಪವೇ. ನೌಕರರ ಪ್ರತಿಭಟನೆ ನಡೆದಾಗಲೆಲ್ಲಾ ಎಸ್ಮಾ ಜಾರಿ ಮಾಡುವುದೊಂದೇ ಅದರ ಮುಂದೆ ಇರುವ ಆಯ್ಕೆ. ಇದಕ್ಕೆ ನೌಕರರ ಸಂಘ ಹೇಗೆ ನಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

ಎಸ್ಮಾ ಎಂದರೇನು?

ಎಸ್ಮಾ ಎಂದರೆ Essential Services Maintenance Act ಕನ್ನಡದಲ್ಲಿ ಅಗತ್ಯ ಸೇವೆ ನಿರ್ವಹಣೆ ಕಾಯಿದೆ ಎಂದು ಕರೆಯಬಹುದು. ಈ ಕಾಯ್ದೆ 1968 ರಿಂದ ಜಾರಿಗೊಳಿಸಲಾಗಿದೆ. ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿ ಪರಿಸ್ಥಿತಿ ಸಂಪೂರ್ಣ ಕೈ ಮೀರಿ ಹೋಗುತ್ತಿದೆ ಎಂಬ ಸಂದರ್ಭದಲ್ಲಿ ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಭಂಗ ಬರುವ ಸಂಭವ ಹೆಚ್ಚಿದೆ ಎಂದಾಗ ಸರ್ಕಾರ ಎಸ್ಮಾ ಜಾರಿಗೆ ಮುಂದಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ