ಸುದ್ದಿಲೈವ್/ಶಿವಮೊಗ್ಗ
ಆಗುಂಬೆಯ ಪೂಜಾಳ ಕೊಲೆಯನ್ನ ಅವರ ಸಂಬಂಧಿಯೇ ಆದ ಮಣಿಕಂಠ ಮಾಡಿರುವುದಾಗಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೊಲೆ ಮಾಡಿದ ಆರೋಪಿ ದೃಶ್ಯ ಸಿನಿಮಾದಲ್ಲಿ ನಾಯಕ ನಟ ಹೇಗೆ ಪೊಲೀಸರಿಗೆ ಸಾಕ್ಷಿ ನೀಡದೆ ಜೀವನ ಸಾಗು ಹಾಕ್ತಾನೆ ಹಾಗೆ ಮಾಡಲು ಹೋಗಿ ನಿಭಾಯಸಲು ಆಗದೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿರುವ ರೋಚಕ ಕಥೆ ಇದು.
ದೃಶ್ಯ ಸಿನಿಮಾದಲ್ಲಿ ಸಿನಿಮಾ ನಾಯಕನ ಮಗಳನ್ನ ಅತ್ಯಾಚಾರ ಮಾಡಿದವನನ್ನ ರಕ್ಷಿಸಲು ಹೋಗಿ ಅಚನಾಕ್ಕಾಗಿ ಕೊಲೆ ಮಾಡಿಬಿಡುವ ರೋಚಕ ಕಥೆ ಅದು. ಆದನ್ನ ನಾಯಕ ಹೇಗೆ ಪೊಲೀಸರಿಗೆ ಯಾಮಾರಿಸಿ ತನ್ನನ್ನಮತ್ತು ತನ್ನ ಕುಟುಂಬವನ್ನ ಬಙಧನದ ಭೀತಿಯಿಂದ ಬಜಾವ್ ಮಾಡಿರುತ್ತಾನೆ. ಹಾಗೆ ಪೂಜಾಳ ಕಥೆಯಲ್ಲಿ ಆರೋಪಿ ಮಣಿಕಂಠ ಕೊಲೆ ಮಾಡಿ ತನ್ನ ಕೆಲಸದಲ್ಲಿ ತಲ್ಲೀಣನಾಗಿದ್ದನು. ಅದನ್ನ ಪೊಲೀಸರು ಟ್ರೇಸ್ ಮಾಡಿದ್ದೇ ರೋಚಕ.
ಪೂಜಾಳಿಗೆ ಎರಡು ವರ್ಷದ ಹಿಂದೆ ಬೇರೊಬ್ಬನಿಗೆ ಮದುವೆಯಾಗಿರುತ್ತದೆ. ಮದುವೆಯಾಗಿ ಎರಡು ವರ್ಷದ ದಾಂಪತ್ಯ ಜೀವನ ನಡೆಸಿ ನಂತರ ಸಙಸಾರದಲ್ಲಿ ಸರಿಬಾರದ ಕಾರಣ ಗಂಡನನ್ನ ಬಿಟ್ಟು ನಾಲೂರಿನಲ್ಲಿರುವ ತಾಯಿ ಮನೆಗೆ ಬಂದಿರುವುದಾಗಿ ಹೇಳಿದರು.
ಸಂಬಂಧಿಯೇ ಆಗಿದ್ದ ಮಣಿಕಂಠ ಮದುವೆಯಾಗುವ ಮೊದಲು ಪ್ರೀತಿ ಪ್ರೇಮ ಎಂದು ಓಡಾಡಿದ್ದನು. ಗಂಡನನ್ನ ಬಿಟ್ಟು ಬಙದ ಮಣಿಕಂಠ ಪೂಜಾಳಿಗೆ ಹತ್ತಿರ ವಾಗುತ್ತಾನೆ. ಹಣದ ಎಕ್ಸ್ ಚೇಂಜ್ ಸಹ ಆಗಿರುತ್ತದೆ. ಆದರೆ ಪೂಜಾಳ ಹುಟ್ಟುಹಬ್ಬದ ದಿನ ಮಣಿಕಂಠ ಕೊಡಿಸಿದ ಕೇಕ್ ನ್ನ ಬೇರೊಬ್ಬ ಸ್ನೇಹಿತನೊಂದಿಗೆ ಕಟ್ ಮಾಡಿದ್ದಕ್ಕೆ ಮಣಿಕಂಠ ರಿವೇಂಜ್ ಗೆ ಬಿದ್ದಿರ್ತಾನೆ.
ಮನದಲ್ಲಿಯೇ ಈ ವಿಷಯವನ್ನ ಮನದಲ್ಲಿಟ್ಟುಕೊಂಡ ಮಣಿಕಂಠ ಆಗುಂಬೆ ಘಾಟ್ ನಲ್ಲಿ ಕೊಲೆಮಾಡಿ ಮೃತದೇಹವನ್ನ ಬಿಸಾಕಿರುತ್ತಾನೆ. 300 ಅಡಿ ಆಳದ ಘಾಟ್ ನಲ್ಲಿ ಮರವೊಂದಕ್ಕೆ ಆಕೆಯ ಮೃತ ದೇಹ ನೇತಾಡಿಕೊಂಡಿತ್ತು. ಹಾಗಾಗಿ ಆಕೆಯ ಮೃತ ದೇಹ ಪತ್ತೆಯಾಗಿದೆ
ಪೊಲೀಸರು ಸಹ ಮಣಿಕಂಠನನ್ನ ವಿಚಾರಣೆಗೆ ಒಳಪಡಿಸಿದ್ದಾರೆ. 15 ಜನರನ್ನ ವಿಚಾರಣೆ ನಡೆಸಿದ ಪೊಲೀಸರಿಗೆ ಕೆಲ ವಿಷಯವನ್ನ ತಪ್ಪಾಗಿ ಹೇಳಿದ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಪೊಲೀಸರ ಖಡಕ್ ಇನ್ ಟ್ರಾಗೇಷನ್ ಗೆ ಮಣಿಕಂಠ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಈ ಪ್ರಕರಣ ಪತ್ತೆಹಚ್ಚುವಲ್ಲಿ ಪೊಲೀಸರು ಕಷ್ಟನೇ ಪಟ್ಟಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ನಾಪತ್ತೆಯಾದ ಮಹಿಳೆ ಅವರ ಸಂಬಂಧಿಕನೇ ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆಗೆ ಮುವೆಯಾಗಿರುತ್ತದೆ. ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿ ಸರಿಬಾರದ ಹಿನ್ನಲೆಯಲ್ಲಿ ತವರಿಗೆ ಬಂದಿರುತ್ತಾಳೆ. ಹಿಂದೆನೆ ಪ್ರೀತಿ ಪ್ರೇಮವನ್ನ ಮಹಿಳೆಯ ಮೇಲೆ ಇಟ್ಟುಕೊಂಡಿದ್ದ ಮಣಿಕಂಠ ಹತ್ತಿರನಾಗಿದ್ದ.
ಯಾವ ಕ್ರಿಮಿನಲ್ ಬ್ಯಾಕ್ ರೌಂಡ್ ಇಲ್ಲದ ಮಹಿಳೆಯನ್ನಕೊಲೆ ಮಾಡಿರುವ ಬಗ್ಗೆ ಅನುಮಾನವಿತ್ತು. ಈ ಹಿನ್ಬಲೆಯಲ್ಲಿ ಕೊಲೆಗಾರನನ್ನ ಪತ್ತೆಹಚ್ಚಲಾಯಿತು ಎಂದರು.
ಇದನ್ನು ಓದಿ-https://suddilive.in/archives/18688
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ