ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಬಿಡಲು ಮುಂದಾಗಿದ್ದ ಸಿಬ್ಬಂದಿಗೆ ಆಸ್ಪತ್ರೆಯ ಮ್ಯನೇಜರ್ ಹಾಗೂ ಇತರೆ ಇಬ್ಬರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವ ಬಗ್ಗೆ ಪಿಸಿಆರ್ ಮೂಲಕ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಗರದ ರಸ್ತೆಯ ಆಸ್ಪತ್ರೆಯಲ್ಲಿ 2017 ರಿಂದ ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಹೊಸೂರು ಕೊನಗನವಳ್ಳಿ ಯುವಕ ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ರಾತ್ರಿ ಪಾಳಿ ಹಾಗೂ ಅಧಿಕ ಸಮಯದ ಕೆಲಸದಿಂದ ಕೆಲಸಬಿಡುವುದಾಗಿ ಹೇಳಿದ್ದಾರೆ.
ಕೆಲಸ ಹೇಗೆ ಬಿಡ್ತೀಯ ಎಂದು ಗದರಿಸಿದ ಅಲ್ಲಿನ ಮ್ಯಾನೇಜರ್ ಮತ್ತು ಇತರರು ಕೆಲಸ ಬಿಟ್ಟು ಹೋದರೆ ಬೇರೆಡೆ ಕೆಲಸ ಸಿಗದಂತೆ ಮಾಡುವುದಾಗಿ ಗದರಿಸಿದ್ದಾರೆ. ಒಂದು ದಿನ ಮಧ್ಯಾಹ್ನ 12 ರಿಂದ 8 ಗಂಟೆಯವರೆಗೆ ಕೆಲಸ ಮುಗಿಸಿದರೂ ಯುವಕನನ್ನ ಬಿಡದ ಮೂವರು ರೂಂಮಿನಲ್ಲಿ ಕೂಡು ಹಾಕಿ ಕೆಲಸ ಬಿಡುವುದಾಗಿ ಹೇಳಿದರೆ ಇಂಜೆಕ್ಷನ್ ಕೊಟ್ಟು ದೇಹದ ಯಾವುದೇ ಅಂಗಾಂಗ ಕೆಲಸ ಮಾಡದಂತೆ ಮಾಡುತ್ತೇವೆ ಎಂದು ಗದರಿಸಿದ್ದಾರೆ.
ನಾವು ಹೇಳಿದಂತೆ ಬರೆದುಕೊಟ್ಟರೆ ನಿನನ್ನ ನಿವೃತ್ತಿಗೊಳಿಸುತ್ತೇವೆ. ಇಲ್ಲವಾದಲ್ಲಿ ಸಂಸ್ಥೆಗೆ ವಂಚನೆ ಮಾಡಿರುವ ಆರೋಪದ ದೂರನ್ನ ಪೊಲೀಸರಿಗೆ ಕೊಡುವುದಾಗಿ ಬೆದರಿಸಿರುತ್ತಾರೆ. ಯಾವಾಗ ಯುವಕ ಕೆಲಸ ಬಿಡುತ್ತಾನೆಂದು ಗೊತ್ತಾಗುತ್ತದೆ. ಆಗ ತುಂಗನಗರ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿರುವುದಾಗಿ ಯುವಕ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣ 2022 ರಲ್ಲಿ ನಡೆದಿತ್ತು. ಯಾವಾಗ ದೂರು ನೀಡಲಾಗಿತ್ತು. ನಿರೀಕ್ಷಣ ಜಾಮೀನು ಪಡೆಯಲು ಸಮಯ ಬೇಕಿದ್ದರಿಂದ ಜು.11/2024 ರಂದು ಮ್ಯಾನೇಜರ್ ಹರೀಸಿಂಗ್, ನಳಿನ ಮತ್ತು ಸವಿತರ ವಿರುದ್ಧ ಸುರೇಶ್ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/19140
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ