ಬುಧವಾರ, ಜುಲೈ 24, 2024

ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು

 

ಉರುಳಿಗೆ ಬಿದ್ದು ಚಿರತೆ ಸಾವು

ಸುದ್ದಿಲೈವ್/ಸೊರಬ


ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆ ಗ್ರಾಮದಲ್ಲಿ ಬುಧವಾರ ನಡೆದಿದೆ. 


ಗ್ರಾಮಸ್ಥರೊಬ್ಬರು ಚಿರತೆ ಉರುಳಿಗೆ ಸಿಲುಕಿ ಕೂಗುವುದನ್ನು ಕಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಶಿವಮೊಗ್ಗದಿಂದ ಅರವಳಿಕೆ ತಜ್ಞರು ಆಗಮಿಸಿ ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ  ನೀಡುವಷ್ಟರಲ್ಲಿ ಚಿರತೆ ಮೃತಪಟ್ಟಿದೆ. 


ಜಮೀನಿನೊಂದರ ತಂತಿ ಬೇಲಿಗೆ ಹಂದಿ‌ ಹಿಡಿಯಲು ಅಳವಡಿಸಿದ್ದ ಉರುಳಿಗೆ ಸಿಲುಕಿ ಸುಮಾರು 4 ವರ್ಷದ ಗಂಡು ಚಿರತೆ ಮೃತಪಟ್ಟಿದ್ದು, ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್. ಪರಶುರಾಮ್, ಉಪವಲಯ ಅರಣಯಾಧಿಕಾರಿಗಳಾದ ಜಿ. ಪರಶುರಾಮ್, ರಾಮಪ್ಪ, ಗಸ್ತು ಅರಣ್ಯಪಾಲಕರಾದ ಹರೀಶ್, ಆನಂದ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ಈ ಸಂಬಂಧ ಜಮೀನಿನ ಮಾಲಿಕ ರಾಜು ಸಿ. ಕಳತ್ತೂರು ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮೃತ ಚಿರತೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಲಾಯಿತು.

ಇದನ್ನೂ ಓದಿ-https://www.suddilive.in/2024/07/12-74.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ