ಶನಿವಾರ, ಜುಲೈ 27, 2024

ಹಳೇ ಮಂಡ್ಲಿಯಲ್ಲಿ ರಸ್ತೆಯ ಮೇಲೆ ಹರಿದ ತುಂಗ ನದಿ




ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ತುಂಗ ನದಿಗೆ 85 ಸಾವಿರ ಕ್ಯೂ ಸೆಕ್ ನೀರು ಹರಿದು ಬರುತ್ತಿದ್ದು ನ್ಯೂ ಮಂಡಳಿಯ ಬಳಿ ತೀರ್ಥಹಳ್ಳಿ ರಸ್ತೆಯ ಮೇಲೆ ನದಿ ನೀರು ಹರಿದಿದೆ. 


ಶಿವಮೊಗ್ಗದಲ್ಲಿ ಪುಷ್ಯ ಮಳೆ ಆಗಾಗ ಸುರಿಯುತ್ತಿದೆ. ಶುಕ್ರವಾರದ ಮಳೆಗೆ  ಶನಿವಾರ ವಿಶ್ರಾಂತಿ ಪಡೆದಿದೆ. ಆದರೆ ತುಂಗ ನದಿಗೆ ಜಲಾನಯನ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. 



ಜಲಾನಯನ ಪ್ರದೇಶಗಳಾದ ಶೃಂಗೇರಿಯಲ್ಲಿ 164 ಮಿಮಿ, ಕಿಗ್ಗದಲ್ಲಿ 220 ಮಿಮಿ, ಹರಿಹರಪುರ 118 ಮಿಮಿ, ತೀರ್ಥಹಳ್ಳಿಯಲ್ಲಿ‌ 120 ಮಿಮಿ, ಕೊಪ್ಪ 97 ಮಿಮಿ ಮಳೆಯಾಗಿದೆ. ಇದರ ಪತಿಣಾಮವಾಗಿ ಶಿವಮೊಗ್ಗದಲ್ಲಿ ತುಂಗೆಗೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 


ಇದರಿಂದ ಸಂದಿಗಳಲ್ಲಿ ನದಿಯ ನೀರು ನುಗ್ಗುತ್ತಿದೆ. ಹಳೇ ಮಂಡ್ಲಿಯಲ್ಲಿ ನೀರು ತೀರ್ಥಹಳ್ಳಿ ರಸ್ತೆ ಮೇಲೆ ಹರಿದಿದೆ. ಲಕ್ಷ್ಮೀ ಪುರದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.  


ಇದನ್ನೂ ಓದಿ-https://www.suddilive.in/2024/07/blog-post_958.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ