ಶನಿವಾರ, ಜುಲೈ 27, 2024

ಪತ್ರಕರ್ತರಿಗೂ ಶೀಘ್ರ ಆರೋಗ್ಯ ವಿಮೆ-ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್

 

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರಿಗೆ ಸನ್ಮಾನ

ಸುದ್ದಿಲೈವ್/ಶಿವಮೊಗ್ಗ


ಪತ್ರಕರ್ತರಲ್ಲಿ ಕೇಳಿಸಿಕೊಳ್ಳುವ ಹಾಗೂ ಆಲೋಚನೆ ಮಾಡುವ ಗುಣಮಟ್ಟ ಕಡಿಮೆಯಾಗಿದೆ  ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ತಿಳಿಸಿದರು.


ಸರ್ಕಾರ ನೌಕರ ಭವನದಲ್ಲಿ  ಕರ್ನಾಟಕ ಸರ್ಕಾರ, ವಾರ್ತ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ, ಪ್ರೆಸ್ ಟ್ರಸ್ಟ್ ವತಿಯಿಂದ  ಪ್ರತಿಕಾ ದಿನಾಚರಣೆ, ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿ, ಇದರಿಂದಾಗಿ ಪತ್ರಿಕೋದ್ಯಮ ದಾರಿ ತಪ್ಪಿದೆ, ಘಟನೆಗಳ ಬಗ್ಗೆ ಪರಿಶೀಲನೆ ಕಡಿಮೆಯಾಗಿದೆ. ಓದುಗರೇ  ದೊರೆ ಎಂಬ ಘೋಷಾವಾಕ್ಯ ಪತ್ರಿಕೋದ್ಯಮದಿಂದ ದೂರವಾಗಿದೆ. ಏಕೆಂದರೆ ಅವರು ಇಷ್ಟಪಡುವ ಸುದ್ದಿಗಳನ್ನೇ  ಕೊಡ್ತಾ ಇಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. 



ಇದಕ್ಕೆ ಉದಾಹರಣೆಯಾಗಿ ಘಟನೆಯೊಂದನ್ನ ಪ್ರಸ್ತಾಪಿಸಿದ ಸಿಎಂ ಸಲಹೆಗಾರರು, ಬರಪೀಡಿತ ಜಿಲ್ಲೆಗಳ ಕುರಿತು ಸಿಎಂ ನೇತೃತ್ವದಲ್ಲಿ ಸಭೆ ನಡೆದಾಗ ಸಿಎಂ ಕಾರಿನ ಮೇಲೆ ಕಾಗೆ ಕೂತಿದ್ದೇ ಸುದ್ದಿಯಾಗಿತ್ತು. ಬರ ಪೀಡಿತ ರೈತರಿಗೆ ಸಿಎಂ ಏನು ಹೇಳುದ್ರು ಎಂಬುದು ತಲುಪಲೇ ಇಲ್ಲ. ಹಾಗಾಗಿ ಸೃಜನಾತ್ಮಕತೆ ಕಡಿಮೆಯಾಗಿದೆ ಎಂದರು. 


ಶ್ರೀಮಂತರ ಮನೆಯ ಮದುವೆ ಮತ್ತು ಅವರ ನಾಯಿಗಳು ಸುದ್ದಿಯಲ್ಲಿ ವಿಜೃಂಭಿಸುತ್ತಿದೆ. ಇದು ಯಾರಿಗೆ ಲಾಭವಾಗುತ್ತಿದೆ.ಬರವಣಿಗೆ ಕಡಿಮೆಯಾಗಿದೆ. ವಾಟ್ಸಪ್ ಯೂನಿವರ್ಸಿಟಿಯ ಗುಲಾಮರಾಗಿದ್ದೇವೆ.


ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡುವ ಯೋಜನೆ ಜಾರಿಯಾಗುತ್ತಿದೆ. ಒಂದು ತಿಂಗಳಲ್ಲಿ ಅವರ ಕೈ ಸೇರಲಿದೆ. ಪತ್ರಕರ್ತರು ಚಿಕಿತ್ಸೆಗೆ ಹಣವಿಲ್ಲದೆ ಸಾವನ್ಬಪಿರುವ ಘಟನೆ ನಡೆದಿದೆ. ಆರೋಗ್ಯ ವಿಮೆ ಯೋಜನೆ ಜಾರಿ ತರಲು ವಿಳಮಬವಾಗುತ್ತಿದೆ. 


10 ಕೋಟಿ ಹಣವಿದೆ. ಅದಕ್ಕೆ ಗೈಡ್ ಲೈನ್ಸ್ ಬರ್ತಾಇದೆ. ಬಿಪಿಎಲ್ ಕಾರ್ಡ್ ದಾರ ಪತ್ರಕರ್ತರಿಗೆ ಯೋಜನೆ ಇದೆ ಅದನ್ನ ಸಡಿಲಗೊಳಿಸಲಾಗಿವುದು. ಸಮಾಜದ ಬಗ್ಗೆ ಚಿಂತಿಸುವ ಪತ್ರಕರ್ತರು ಕುಟುಂಬಕ್ಕೂ ಹೆಚ್ಚು ಸಮಯ ನೀಡಿ ಎಂದು ಸಲಹೆ ನೀಡಿದರು. 


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಯಾರು ಎಂಬುದು ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಸೋಷಿಯಲ್ ಮೀಡಿಯಾದ 32% ಸತ್ಯಾಂಶ ಉಳಿಸಿಕೊಂಡಿದೆ. ಎಲೆಕ್ಟ್ರಾನಿಕ್ ಮೀಡಿಯಾ ಸಹ 50% ಆಜುಬಾಜಿನಲ್ಲಿದೆ. ಪ್ರಿಂಟ್ ಮೀಡಿಯಾ 62% ಸತ್ಯಾಂಶವನ್ನ ಹೊಂದಿದ ಸತ್ಯವನ್ನ ಬಿಂಬಿಸುತ್ತಿದೆ. ಇದನ್ನ ಪ್ರಿಂಟ್ ಮೀಡಿಯಾ ಹೇಗೆ ಮೇಲೆತ್ತು ಹೋಗಲಿದೆ ಎಂಬುದು ನಮ್ಮ‌ಮುಂದೆ ಇರುವ ಸವಾಲಾಗಿದೆ ಎಂದರು. 



ವೇದಿಕೆ ಮೇಲೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಙಘದ ಅಧ್ಯಕ್ಷ ಶಿವಕುಮಾರ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ರಿಷಿಕೇಶ್ ಬಹದ್ದೂರ್ ದೇಸಾಯಿ, ವಾರ್ತಾಧಿಕಾರಿ ಮಾರುತಿ, ಗೋಪಾಲ ಯಡಗೆರೆ, ಅಗ್ನಿ ಗಿರಿ ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. 


ಇದನ್ನೂ ಓದಿ-https://www.suddilive.in/2024/07/blog-post_231.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ