ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮದಾರಿ ಪಾಳ್ಯದಲ್ಲಿರುವ ಜಾಮಿಯಾ ಮಸೀದಿಯ ಕಾಂಪೌಂಡ್ ಗೋಡೆ ಹಾನಿಗೊಳಗಾಗಿದೆ. ಮಸೀದಿಯ ಕಾಂಪೌಂಡ್ ಒಳಗಿರುವ ಶೌಚಾಲಯ ಮತ್ತು ಗೋಡೆ ಕುಸಿದು ಬಿದ್ದಿದೆ.
ನದಿಯ ದಂಡೆ ಮೇಲಿರುವ ಮಸೀದಿಯ ಶೌಚಾಲಯ ಮತ್ತು ಕಾಂಪೌಂಡ್ ನದಿಯ ಹರಿವು ಮತ್ತು ಮಳೆಗೆ ತಂಡಿಯಾಗಿ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಹಾಗೂ ನೋವುಗಳು ಸಂಭವಿಸಿಲ್ಲ.
ಹರಕೆರದಿಂದ ಬೈಪಾಸ್ ಸೇತುವೆಯ ವರೆಗೂ ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ ಇದೆ. ಈ ತಡೆಗೋಡೆಗೆ ಹಣ ಬಿಡುಗಡೆಯಾಗಿದೆ ಎಂದು ಸ್ಥಳೀಯರು ಹೇಳಿತ್ತಿದ್ದಾರೆ. ಆದರೆ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ತಡೆಗೋಡೆ ನೀರ್ಮಾಣವಾಗದೆ ಹಾನಿಯುಂಟಾಗಿದೆ ಎಂಬುದು ಸ್ಥಳೀಯರ ಆರೋಪವೂ ಆಗಿದೆ.
ಇದನ್ನೂ ಓದಿ-https://www.suddilive.in/2024/07/blog-post_433.html
It's not madari palya, it's SAWAI PALYA please correct it
ಪ್ರತ್ಯುತ್ತರಅಳಿಸಿ